Saturday, 14 December 2019

ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ ankita jagannatha vittala

ಜಗನ್ನಾಥದಾಸರು

ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ l

ಪ್ರಣತ ಕಾಮದನೆ ಪ್ರಾರ್ಥಿಸುವೆ ಪ್ರಭುವೆಂದೂ ll ಪ ll


ಸಕಲ ಜೀವ ಜಡಾತ್ಮಕ ಜಗತಿನೊಳಗಿದ್ದು l

ಅಕಳಂಕ ನಾಮರೂಪದಲಿ ಕರಿಸೀ l

ಪ್ರಕಟನಾಗದಲೆ ಮಾಡಿಸಿ ಸರ್ವವ್ಯಾಪಾರ l

ಸುಖದುಃಖಗಳಿಗೆ ಎಮ್ಮನು ಗುರಿ ಮಾಡಿನೋಳ್ಪೆ ll 1 ll


ಏನೆಂಬೆ ನಿನ್ನ ಮಹಿಮೆಗೆ ರಮಾಪತಿ l

ನಿನ್ನಧೀನರಲ್ಲವೆ ತತ್ವಮಾನಿ ಸುರರೂ l

ದಾನವಾಂತಕನೆ ವಿಜ್ಞಾಪನವ ಕೈಕೊಂಡು l

ದೀನರುದ್ಧರಿಸುವದು ದಯದಿಂದ ನಿರತಾ ll 2 ll


ಸರ್ವ ಸ್ವತಂತ್ರ ನೀನಾದ ಕಾರಣ ಬ್ರಹ್ಮ l

ಶರ್ವಾದಿ ಸುರರು ಪ್ರಾರ್ಥಿಸುತಿಪ್ಪರೂ l

ದುರ್ವಿಭಾವ್ಯನೆ ಸುರರಿಗಮೃತ ಪಾನವಗೈಸಿ l

ಗರ್ವಿಸಿದ ದಾನವರ ಗಣವ ಸಂಹರಿಪೆ ll 3 ll


ಬುದ್ಧ್ಯಾದಿ ಇಂದ್ರಿಯಗಳೊಳಗೆ ತತ್ಪತಿಗಳೊಳ l

ಗಿದ್ದು ಬಹುವಿಧ ಚೇಷ್ಟಗಳನೇ ಮಾಡೀ l

ಬದ್ಧರನೆ ಮಾಳ್ಪೆ ಭವದೊಳಗೆ ಜೀವರನ ಅನಿ l

ರುದ್ಧನೆಂದೆನಿಪೆ ಎಲ್ಲರೊಳು ವ್ಯಾಪಕನಾಗಿ ll 4 ll


ಧಾಶರಥಿ ನೀನು ಗತಿ ಎಂದು ಮೊರೆಹೊಕ್ಕ ವಿ l

ಭೀಷಣಗೆ ಲಂಕಾಧಿಪತ್ಯವಿತ್ತೆ l

ವಾಸವಾನುಜ ಜಗನ್ನಾಥವಿಟ್ಠಲ ಭಕ್ತ l

ಪೋಷಕನು ನೀನಹುದು ಕಲ್ಪ ಕಲ್ಪಗಳಲ್ಲಿ ll 5 ll

***


ಪ್ರಣವ ಪ್ರತಿಪಾದ್ಯ ಪ್ರಹ್ಲಾದವರದಾ ಪ

ಪ್ರಣತಕಾಮದನೆ ಪ್ರಾರ್ಥಿಸುವೆ ಪ್ರಭುವೆಂದು ಅ.ಪ.

ಸಕಲ ಜೀವ ಜಡಾತ್ಮಕ ಜಗತ್ತಿನೊಳಗಿದ್ದು
ಅಕಳಂಕ ನಾಮರೂಪದಲಿ ಕರೆಸಿ
ಪ್ರಕಟನಾಗದಲೆ ಮಾಡಿಸಿ ಸರ್ವ ವ್ಯಾಪಾರ
ಸುಖ ದುಃಖಗಳಿಗೆ ಗುರಿಮಾಡಿ ಎಮ್ಮನು ನೋಳ್ಪೆ 1

ಏನೆಂಬೆ ನಿನ್ನ ಮಹಿಮೆಗೆ ರಮಾಪತಿ ನಿನ್ನ
ಸುರರು ದೀನರುದ್ಧರಿಸುವುದು ದಯದಿಂದ ನಿರುತಾ 2

ಸರ್ವ ಸ್ವತಂತ್ರ ನೀನಾದ ಕಾರಣ ಬ್ರಹ್ಮ
ಶರ್ವಾದಿಸುರರು ಪ್ರಾರ್ಥಿಸುತಿಪ್ಪರು
ದುರ್ವಿಭಾವ್ಯನೆ ಸುರಗಮೃತ ಪಾನವ ಗೈಸಿ
ಗರ್ವಿಸಿದ ದಾನವರ ಗಣವ ಸಂಹರಿಪೆ 3

ಬುಧ್ಯಾದಿ ಇಂದ್ರಿಯಗಳೊಳಗೆ ತತ್ಪತಿಗಳೊಳ
ಗಿದ್ದು ಬಹುವಿಧ ಚೇಷ್ಟೆಗಳನೆ ಮಾಡಿ
ಬದ್ಧರನ ಮಾಳ್ಪೆ ಭವದೊಳಗೆ ಜೀವರನ ಅನಿ
ರುದ್ಧರೆಂದೆನಿಪೆ ಎಲ್ಲರೊಳು ವ್ಯಾಪಕನಾಗಿ 4

ದಾಶರಥಿ ನೀನೆ ಗತಿಯೆಂದು ಮೊರೆಹೊಕ್ಕೆ ವಿ
ಭೀಷಣಗೆ ಲಂಕಾಧಿಪತ್ಯವಿತ್ತೇ
ವಾಸವಾನುಜ ಜಗನ್ನಾಥ ವಿಠ್ಠಲ ಭಕ್ತ
ಪೋಷಕನು ನೀನಹುದು ಕಲ್ಪ ಕಲ್ಪಗಳಲ್ಲಿ 5
*******

No comments:

Post a Comment