Saturday, 14 December 2019

ಭಾರತೀ ರಮಣಾ ಮನ್ಮನದಲಿ ತೋರು ankita jagannatha vittala

ಜಗನ್ನಾಥದಾಸರು
ಭಾರತೀರಮಣಾ ಮನ್ಮನದಲಿ
ತೋರು ತವ ಚರಣಾ ಪ

ಮೂರೇಳು ಸಾವಿರದಾರುನೂರು ಜಪ
ಓರಂತೆ ಜಪಿಸಿ ಉದ್ಧಾರ ಮಾಡುವಿ ಎಮ್ಮ ಅ.ಪ.

ಮೂರುವಿಧ ಜೀವರೋಳು ಹೊರ ನೀ ಪ್ರೇರಕನೋ ದೇವ
ನಾರಾಯಣನ ನಿಜಾರಾಧಕರೊಳು
ಆರು ನಿನಗೆ ಸರಿ ಮೂರವತಾರನೆ 1

ಚತುರವಿಂಶಶಿ ತತ್ವೇಶರಾಪತಿಯ ನಿನ್ನ
ತುತಿಪ ಉಪೇಂದ್ರ ಸುಯತಿಕರ ಪೂಜಿತ
ನತಿಸುವೆ ಎಮಗೆ ಸನ್ನತಿ ಕೊಡು ಸರ್ವದಾ 2

ಪ್ರಾಣಪಂಚಕ ರೂಪನೆ ಖಳ ಶ್ರೇಣೀವಂಚಕ
ಕ್ಷೋಣಿಯೊಳಗೆ ಕೃಷ್ಣ ವೇಣೀತರಂಗಿಣಿ
ತ್ರಾಣಗೈದ ನಿರ್ವಾಣ ಪ್ರದಾಯಕ 3

ಲೋಕರೂಪನೆ ಜಗದೊಳನೇಕ ಚರಿತನೆ
ಪಿನಾಕಿ ಸುರೇಂದ್ರ ದಿ
ವೌಕಸರೆಮ್ಮನು ಸಾಕುವರನುದಿನ4

ಮಾತರಿಶ್ವನು ಜಾತಹನುಮ ಜಗನ್ನಾಥವಿಠಲನ
ಪ್ರೀತಿಯಿಂದಲಿ ತೋರೋ 5
*********

No comments:

Post a Comment