Showing posts with label ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು vijaya vittala. Show all posts
Showing posts with label ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು vijaya vittala. Show all posts

Thursday 17 October 2019

ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು ankita vijaya vittala

ವಿಜಯದಾಸ
ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು |
ತಾರಯ್ಯಾ ಒಂದು ಚುಂಬನ ಕರುಣ |
ಬೀರಯ್ಯಾ ನಮ್ಮ ವಶಕೆ ಪ

ಶೋಭಾನೆ || ನಿಲ್ಲು ನಿಲ್ಲೆಲೊ ದೇವಾ |
ಎಲ್ಲಿ ಪೋಗುವಾ ನೀನು ಸಲ್ಲದು ನಿನ್ನ ಚೋರಂಗ
ಲೀಲಿಗೆ ಪಳ್ಳಿಸೋಕುದೆ ಇಲ್ಲ ಇಲ್ಲದೆ 2

ಹಾರಿಸಿ ವೈದು ಮರನೇರಿ | ಹಾರಿಸಿ ಮರನೇರಿದ ಸಣ್ಣ |
ಪೋರ ಬುಧ್ಧಿಗಳ ಬಿಡವಲ್ಲಿ 3

ತುರುಕರಗಳ ಕಾಯ್ದು | ಚರಿಸಿದೆ ಅಡವಿಯ |
ಪರಸತಿಯರ ವ್ರತಗಳ | ಪರಸತಿಯರ ವ್ರತಗಳ ಕೆಡಿಸಿದ |
ಪರಮಾತ್ಮನಿಗೆ ಎಣೆಯುಂಟೆ 4

ಕೇಸಕ್ಕಿ ತಿರುಮಲ ಲೇಸಯ್ಯಾ ನಿನ್ನ ಗುಣ |
ಕಾಸುಕಾಸಿಗೆ ಬಿಡದಲೆ | ಕಾಸುಕಾಸಿಗೆ ಬಿಡದೆ |
ಬಡ್ಡಿಕೊಂಬ ಆಶೆಗಾರನು ಬಹು ಸೂರಾಳೊ 5

ಅಣಕವಾಡಲಿ ಬೇಡ ಕೆಣಕಿದರೆ ನಿನ್ನ |
ಹೊಣಿಕೆಹಾಕುವೆ ಹಿಡತಂದು ಎನ್ನಯ |
ಮನವೆ ನಿನ್ನಯ ಚರಣಕ್ಕೆ ಶೋಭಾನೆ 6

ಬೆಟ್ಟದ ಕೊನೆ ಏರಿ ಎಷ್ಟು ದೂರ ಓಡೀ |
ಗಟ್ಯಾಗಿ ನಿನ್ನ ಚರಣದ | ಗಟ್ಯಾಗಿ ನಿನ್ನ ಚರಣದ ಕೊನಿಯ ಉಂ
ಗುಷ್ಟ ಕಚ್ಚದಲೆ ಬಿಡೆ ನಾನು 7

ಹಿಂದೆ ಯಾರು ಏನು ತಂದು ಕೊಟ್ಟರೋ ನಿನಗೆ |
ಇಂದು ನಾನೇನು ಕೊಡಲಿಲ್ಲವೆಲೋ ತಂದೆ |
ಕಣ್ಣಿರದು ನೋಡೊ ಕಮಲಾಕ್ಷ | ಶೋಭಾನೆ 8

ಭಕ್ತನ ನುಡಿಕೇಳಿ ಚಕ್ಕನೆ ಬಿಗಿದಪ್ಪಿ |
ತೆಕ್ಕಿಸಿದಾ ವಿಜಯವಿಠ್ಠಲ ಎನ್ನ
ಅಕ್ಕರವೆಲ್ಲ ತೀರಿಸಿದಾ | ಶೋಭಾನೆ 9
*******