Showing posts with label ಸೂರೆಮಾಡೆ ವರಗಳ ಹೊಸೂರ ದೇವತೆ ತೋರೆ ನಿನ್ನ ದಯವ ತುಂಬಿಕೊಂಡು bheemesha krishna. Show all posts
Showing posts with label ಸೂರೆಮಾಡೆ ವರಗಳ ಹೊಸೂರ ದೇವತೆ ತೋರೆ ನಿನ್ನ ದಯವ ತುಂಬಿಕೊಂಡು bheemesha krishna. Show all posts

Wednesday, 1 September 2021

ಸೂರೆಮಾಡೆ ವರಗಳ ಹೊಸೂರ ದೇವತೆ ತೋರೆ ನಿನ್ನ ದಯವ ತುಂಬಿಕೊಂಡು ankita bheemesha krishna

 ..

ಸೂರೆಮಾಡೆ ವರಗಳ ಹೊಸೂರ ದೇವತೆ

ತೋರೆ ನಿನ್ನ ದಯವ ತುಂಬಿಕೊಂಡು ನಾ

ಪೋಗುವೆನು ಮನೆಗೆ ಪ


ಶೀಘ್ರದಿಂದ ನಿನ್ನ ಸಾಲಿಗ್ರಾಮವುಳ್ಳ ನೇತ್ರದಿಂದ ಅ-

ನುಗ್ರ (ಹ) ಮಾಡಿ ನೋಡೆ ಎನ್ನ ಶಿರಬಗ್ಗಿಸ್ವಂದನೆ ಮಾಡುವೆನು 1


ರೇಣುಕಾಂಬ ನಿನ್ನ ಪಾದರೇಣು ತೋರೆ ಕರುಣದಿಂದ

ಕಾಣೆ ನಿನ್ನ ಸರಿ ಲೋಕದೊಳಗೆ ಪಾಣಿ ಹಿಡಿಯೆ ಪಾಲಿಸೆನ್ನ 2


ಸತ್ಯವಂತೆ ಕಳೆಯೆ ಈ ತಾಪತ್ರಯ ದಾರಿದ್ರ್ಯ ದೋಷ

ನಿತ್ಯದಲಿ ನಾ ನಿನ್ನ ಭಾಳ ಭಕ್ತಿಯಿಂದ ಬೇಡಿಕೊಂಬೆ3


ಬಾಳೆದಂಡಿಗೆ ಪಾಯಸ ನಿನ್ನ ಭಾಳ ಮಹಾತ್ಮ್ಯಗಳನೋಡಿ ಅ-

ರಳು ಮಲ್ಲಿಗೆ ಕುಸುಮ ಕುಂಕುಮ ಬೇಡುವೆ ಪ್ರಸಾದವನ್ನು 4


ಜಮದಗ್ನಿಸತಿಯೆ ನೀ ಭೀಮೇಶಕೃಷ್ಣನಾದ ಭಾರ್ಗವ-

ರಾಮನ ಮಾತೆಯೆ ಕರುಣದಿ ಕಾಮಿತಾರ್ಥವ ಕೊಟ್ಟು ಕಾಯೆ 5

***