Showing posts with label ದಣಿಯ ನೋಡಿದೆನೊ ನಿನ್ನ ವೆಂಕಟರನ್ನಾ kalimardhanakrishna. Show all posts
Showing posts with label ದಣಿಯ ನೋಡಿದೆನೊ ನಿನ್ನ ವೆಂಕಟರನ್ನಾ kalimardhanakrishna. Show all posts

Monday, 2 August 2021

ದಣಿಯ ನೋಡಿದೆನೊ ನಿನ್ನ ವೆಂಕಟರನ್ನಾ ankita kalimardhanakrishna

ದಣಿಯ ನೋಡಿದೆನೊ ನಿನ್ನ ವೆಂಕಟರನ್ನಾ

ದಣಿಯಾ ನೋಡಿದೆ ನಿನ್ನಾ ಪ.


ಋಜಗಣದೊಡೆಯನೆ ಬಿಡುವಿಲ್ಲದೆ ನಿನ್ನ ಅಡಿಗಳಿಗೆ ವಂದಿಪೆ ಅ.ಪ.


ಮಹದ್ವಾರ ಬಾಗಿಲಾದಲ್ಲಿ ಇರುತಿರುವೋರು

ಜಯವಿಜಯರಿಲ್ಲಿ ವಾರವಾರಕ್ಕೆ ನಿನ್ನ

ಬ್ರಹ್ಮಾದಿ ದ್ವಿಜರು ಹಾರೈಸಿ

ಹರುಷದಿ ಪೂಜೆಗೊಂಬೊರೆ 1


ಯಡಬಲದಲ್ಲಿ ನಿನ್ನ ಮಡದಿಯರಿಂದ ಒಡಗೂಡಿ

ಸಡಗರದಲ್ಲಿ ಇಂದಿರೇಶ

ಗರುಡವಾಹನೆ ರಂಗಾ ಉರಗಾದ್ರಿನಿವಾಸ

ಶೇಷಾಚಲವಾಸ ಶ್ರೀ ವೆಂಕಟೇಶಾ 2


ಸೃಷ್ಟ್ಯಾದಷ್ಟ ಕರ್ತಾ

ಶ್ರೀವಿಠಲ ನಿನ್ನಾ ಗುಣಯೆಷ್ಟೆಂದು ವರ್ಣಿಪೆನಾ

ಅಷ್ಟ ಮಹಿಷಿಯರ ಆಳದ ಮದವೆಷ್ಟೊ

ಕಾಳಿಮರ್ದನಕೃಷ್ಣ ಬಲು ಜೋರಾ ದಿಟ್ಟಾ ಆನಂದ ಕೊಟ್ಟಾ3

***