ಕಾಖಂಡಕಿ ಶ್ರೀ ಮಹಿಪತಿರಾಯರು
ದಾವನು ಗುರುಸಹವಾಸಿ ಅವನಿದ್ದದ್ದೇ ಸ್ಥಳ ಕಾಶಿ pa
ಕೂಡಿದವರ ತ್ರಿತಾಪಭಂಗಾ ರೂಢಿಗೆ ಮೆರೆವಳು ಙÁ್ಞನಗಂಗಾ ಮೂಡಿಹ ಆತ್ಮಜ್ಯೋತಿ ಲಿಂಗಾ ಕಂಡಿಹ ಗುಣರಾಸೀ 1
ವಿವರಿಸಿ ತಾರಕಮಂತ್ರದ ನೆಲಿಯಾ ಕಿವಿಯೊಳು ಹೇಳಲು ಗುರುರಾಯಾ ಭವ ಭಯಾ ಸ್ವಾನಂದವ ಬೆರೆಸೀ2
ಜನದಲಿ ನಾನಾ ಸಾಧನ ಜರಿದು ಮನದಲಿ ಒಂದೇ ನಿಷ್ಠಿಯ ಹಿಡಿದು ಅನುಮಾನದ ಸಿದ್ಧಾಂತಗಳದು ಸದ್ಭಾವನೆ ಒಲಿಸೀ 3
ಪ್ರೇಮಿಯ ನಿಜಸುಖ ಪ್ರೇಮಿಕ ಬಲ್ಲಾ ಈ ಮನುಜರಿಗಿದು ಭೇದಿಸುದಲ್ಲಾ ಶ್ರೀ ಮಹಿಪತಿ ಬೋಧಿಸಿದನು ಸೊಲ್ಲಾಪೂರಿಸಿ ಮನದಾಸಿ 4
***