Showing posts with label ಮಂಗಳಂ ಜಯ ಮಂಗಳಂ pranesha vittala. Show all posts
Showing posts with label ಮಂಗಳಂ ಜಯ ಮಂಗಳಂ pranesha vittala. Show all posts

Friday, 15 November 2019

ಮಂಗಳಂ ಜಯ ಮಂಗಳಂ ankita pranesha vittala

ಮಂಗಳಂ ಜಯ ಮಂಗಳಂ | ಜಯಮಂಗಳಂಪರಮೇಷ್ಟಿಜನಕ ಉಪೇಂದ್ರಾ ಪ

ವೇದ ಉದ್ಧಾರ ಶ್ರೀಬಾದರಾಯಣಮಧು |ಸೂದನ ಅಮರರ ಕಾಯ್ದ ದಯಾಬ್ಧೀ 1

ನಂದಗೋಪಾತ್ಮಜಸಿಂಧೂರಪಾಲ ಮು- |ಕುಂದಪಾಲಿಪುದೆನ್ನ ಇಂದೀವರಾಕ್ಷಾ 2

ತುಂಗವಿಕ್ರಮನೆ ಕಾಳಿಂಗ ಮರ್ದನ ದೇವಾ |ಗಂಗ ಜನಕ ಶ್ರೀವಿಹಂಗವಾಹನನೇ 3

ಸಣ್ಣರೂಪದಿ ಬಲಿಯನ್ನು ತುಳಿದ ಶ್ರೀ ವಾ- |ಮನ್ನ ಕ್ಷಿತಿಪಹರ ವನ್ನಜನಾಭಾ 4

ಪ್ರಾಣೇಶ ವಿಠಲ ಶ್ರೀಮಾನಿನಿಪ್ರತಿಶತ|ಮೀನಾಂಕಲಾವಣ್ಯಭಾನುಪ್ರಕಾಶಾ 5
*******