ರಾಗ ಮೋಹನ ಆದಿ ತಾಳ
ದ್ವಾರಕಾಪುರದ ಚಂದ್ರಾನನೆಯರು
ಸೂರ್ಯನ ಅನುದಿನವು ದೂರಿ ದೂಷಿಸುತಿಹರು ||ಪ||
ಹಗಲೆಲ್ಲ ಹರಿಯ ಆಹ್ನಿಕವು
ಜಗಮನೆ ವಾರ್ತೆಗಳೆಲ್ಲ ( ವಾರ್ತೆಗಳಲ್ಲೆ ?) ಕಳೆದು
ಮಿಗೆ ಹರುಷದಿ ರಾತ್ರಿಯಲಿ ಹರಿಯೊಡನೆ
ನಗೆ ನುಡಿಯಿಂದ ದಣಿಯದಲೆ ಉದಿಸಿದನೆಂದು ||
ವನಜನಾಭ ಸತ್ಕರ್ಮಂಗಳ ಹಗಲೆ ಪೂರಯಿಸಿ
ವನಿತೆಯರು ಶೃಂಗಾರಯುಕ್ತರಾಗಿ
ಮನಸಿಜಪಿತಗೆ ಶೃಂಗಾರ ಮಾಡಿ ಸಂಗೀತ-
ವನು ಪಾಡುತಿರೆ ಅರುಣ ಉದಿಸಿದನೆಂದು ||
ಕೋಳಿ ಕಾಗೆ ಖಗಕುಲವನೆಲ್ಲನು ಮುಂದೆ
ಊಳಿಗಕೆ ಭಟರ ಮಾಡಿಕೊಂಡು ಬಾಹ
ಏಳೈದು ಪೆಸರ ನಗರದವಗೆ ನಮ್ಮ
ಗೋಳು ತಾಗಲಿಯೆಂದು ಕೋಪದಿಂದನವರತ ||
ನಮ್ಮ ಪುರದಲಿ ಮಾತ್ರ ನಾಲ್ಕೆಂಟು ದಿನಕೊಮ್ಮೆ
ಹೆಮ್ಮೆಯಿಂದುದಿಸಿದರೆ ಹಾನಿ ಬಹುದೆ
ನಮ್ಮ ಸ್ವಾಮಿಗೆ ಮೋದ ಮಾಡುವುದೆಲ್ಲವನು
ತಮ್ಮ ಸ್ವಾಮಿಯ ಸೇವೆಯಲ್ಲವೆ ತಮನೆಂದು ||
ಈ ವಿಧಗಳಿಂದ ರವಿಯ ದೂರಿ ಹದಿನಾರು
ಸಾವಿರದ ನೂರೆಂಟು ಸತಿಯರೆಲ್ಲ
ದೇವರ ದೇವ ಶ್ರೀಪುರಂದರವಿಠಲನ್ನ
ದೇವೇಶನೆಂದು ತಿಳಿದನವರತ ಭಜಿಸುವರು ||
***
ದ್ವಾರಕಾಪುರದ ಚಂದ್ರಾನನೆಯರು
ಸೂರ್ಯನ ಅನುದಿನವು ದೂರಿ ದೂಷಿಸುತಿಹರು ||ಪ||
ಹಗಲೆಲ್ಲ ಹರಿಯ ಆಹ್ನಿಕವು
ಜಗಮನೆ ವಾರ್ತೆಗಳೆಲ್ಲ ( ವಾರ್ತೆಗಳಲ್ಲೆ ?) ಕಳೆದು
ಮಿಗೆ ಹರುಷದಿ ರಾತ್ರಿಯಲಿ ಹರಿಯೊಡನೆ
ನಗೆ ನುಡಿಯಿಂದ ದಣಿಯದಲೆ ಉದಿಸಿದನೆಂದು ||
ವನಜನಾಭ ಸತ್ಕರ್ಮಂಗಳ ಹಗಲೆ ಪೂರಯಿಸಿ
ವನಿತೆಯರು ಶೃಂಗಾರಯುಕ್ತರಾಗಿ
ಮನಸಿಜಪಿತಗೆ ಶೃಂಗಾರ ಮಾಡಿ ಸಂಗೀತ-
ವನು ಪಾಡುತಿರೆ ಅರುಣ ಉದಿಸಿದನೆಂದು ||
ಕೋಳಿ ಕಾಗೆ ಖಗಕುಲವನೆಲ್ಲನು ಮುಂದೆ
ಊಳಿಗಕೆ ಭಟರ ಮಾಡಿಕೊಂಡು ಬಾಹ
ಏಳೈದು ಪೆಸರ ನಗರದವಗೆ ನಮ್ಮ
ಗೋಳು ತಾಗಲಿಯೆಂದು ಕೋಪದಿಂದನವರತ ||
ನಮ್ಮ ಪುರದಲಿ ಮಾತ್ರ ನಾಲ್ಕೆಂಟು ದಿನಕೊಮ್ಮೆ
ಹೆಮ್ಮೆಯಿಂದುದಿಸಿದರೆ ಹಾನಿ ಬಹುದೆ
ನಮ್ಮ ಸ್ವಾಮಿಗೆ ಮೋದ ಮಾಡುವುದೆಲ್ಲವನು
ತಮ್ಮ ಸ್ವಾಮಿಯ ಸೇವೆಯಲ್ಲವೆ ತಮನೆಂದು ||
ಈ ವಿಧಗಳಿಂದ ರವಿಯ ದೂರಿ ಹದಿನಾರು
ಸಾವಿರದ ನೂರೆಂಟು ಸತಿಯರೆಲ್ಲ
ದೇವರ ದೇವ ಶ್ರೀಪುರಂದರವಿಠಲನ್ನ
ದೇವೇಶನೆಂದು ತಿಳಿದನವರತ ಭಜಿಸುವರು ||
***
pallavi
dvArakApurada candrAnaneyaru sUryana anudinavu dUri dUSisutiharu
caraNam 1
hagalella hariya ahnikavu jaga mane vArtegaLella kaLedu
mige haruSadi rAtriyali hariyoDane nage nuDiyinda daNiyadale udisidanendu
caraNam 2
vanajanAbha satkarmangaLa hagale pUrayisi vaniteyaru shrngArayuktarAgi
manasija pitage shrngAra mADi sangItavanu pADutire aruNa udisidanendu
caraNam 3
kOLi kAge khagakulavanellanu munde Uligake bhaTara mADikoNDu bAha
Elaidu pesara nagaradavage namma gOLu tAgaliyendu kOpadindanavarata
caraNam 4
namma puradali mAtra nAlkeNTu dinakomme hemmeyindudisidare hAni bahude
namma svAmige mOda mADuvudellavanu tamma svAmiya sEveyallave tamanendu
caraNam 5
I vidhagaLindarviya dUri hadinAru svirada nUreNTu satiyarella
dEvara dEva shrI purandara viTTalanna dEvEshanendu tiLidanavarata bhajisuvaru
***