Showing posts with label ಸ್ಮರಿಸು ಗುರು ಸಂತತಿಯನು jagannatha vittala guru parampara VM RM. Show all posts
Showing posts with label ಸ್ಮರಿಸು ಗುರು ಸಂತತಿಯನು jagannatha vittala guru parampara VM RM. Show all posts

Saturday, 14 December 2019

ಸ್ಮರಿಸು ಗುರು ಸಂತತಿಯನು ankita jagannatha vittala guru parampara VM RM

ಸ್ಮರಿಸು ಗುರು ಸಂತತಿಯನು ಮನವೇ ||pa||

ಸ್ಮರಿಸು ಗುರು ಸಂತತಿಯ ಸರ್ವಕಾಲಗಳಲ್ಲಿ
ಪೊರೆವ ಹರಿ ಚತುರವಿಧ ಪುರುಷಾರ್ಥಗಳನಿತ್ತು ||a.pa||

ಪರಮಹಂಸಾಖ್ಯ ಹರಿ ಗುರುತಮನೆನಿಸುತಿಪ್ಪ
ಪರಮೇಷ್ಠಿ ತತ್ಸುತರು ಸನಕಾದ್ಯರಾ
ಕರಕಮಲ ಸಂಜಾತ ಕೂರ್ಮಾಸ ಜ್ಞಾನನಿಧಿ
ಗುರುಡವಾಹನ ತೀರ್ಥ ಕೈವಲ್ಯ ಯತಿವರರ ||1||

ಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞ
ಸೂನು ಸುತಪೋರಾಜ ವರಕುಮಾರಾ
ಮೌನಿಕುಲವರ ಅಚ್ಯುತ ಪ್ರೇಕ್ಷರಂಘ್ರಿಗಳ
ಆ ನಮಿಪೆನನವರತ ಭಕ್ತಿ ಪೂರ್ವಕದೀ ||2||

ಅಚ್ಛಿನ್ನ ಭಕ್ತ ಮರುತವತಾರ ಮಧ್ವಮುನಿ
ಪ್ರೋಚ್ಚಾಬ್ಜನಾಭ ನರಹರಿ ಮಾಧವಾ
ಸಚ್ಚರಿತ ಅಕ್ಷೋಭ್ಯ ಮುನಿಪ ಪ್ರತಿವಾದಿ ಭೂ
ತೋಚ್ಛಾಟನವಗೈದ ಜಯತೀರ್ಥ ಗುರುವರರ ||3||

ವಿದ್ಯಾಧಿರಾಜ ರಾಜೇಂದ್ರ ಸುತಪೋನಿಧಿ ಜ
ಯಧ್ವಜರ ಪುರುಷೋತ್ತಮ ಬ್ರಹ್ಮಣ್ಯರಾ
ಮಧ್ವ ಸಿದ್ಧಾಂತ ಸ್ಥಾಪಕ ವ್ಯಾಸರಾಯ ಪ್ರ
ಸಿದ್ಧ ಶ್ರೀನಿವಾಸಯತಿಗಳ ಪವಿತ್ರ ಪದ ||4||

ಲಕ್ಷ್ಮೀ ಕಾಂತರನ ಶ್ರೀಪತಿ ರಾಮಚಂದ್ರರನ
ಲಕ್ಷ್ಮೀ ವಲ್ಲಭ ಲಕ್ಷ್ಮೀ ನಾಥಪತಿಯಾ
ಲಕ್ಷ್ಮೀ ನಾರಾಯಣರ ಶ್ರೀ ರಘುನಾಥ ಸು
ಭಿಕ್ಷುಗಳ ಜಗನ್ನಾಥ ಗುರುಗಳನಾ ||5||

ಸಾನುರಾಗದಲಿ ಸರ್ವೋತ್ತಮನ ಮೂರ್ತಿ ವಿ
ಜ್ಞಾನ ಪೂರ್ವಕ ಭಜಿಸಿ ಸುಖಿಸುತಿಪ್ಪಾ
ಶ್ರೀನಾಥ ಗುರುವರರ ಕರಕಮಲಜಾತ ವಿ
ದ್ಯಾನಾಥ ಯತಿಗಳನು ಅನುದಿನದಿ ಮರೆಯದಲೆ ||6||

ವಿಧ್ಯಾಧಿರಾಜರ ಕವೀಂದ್ರ ವಾಗೀಶರ ಸ್ವ
ಸಿದ್ಧಾಂತ ಸ್ಥಾಪಿಸಿದ ರಾಮ ಚಂದ್ರಾ
ಅದ್ವೈತ ಕುಮುದ ದಿನಪ ವಿಬುಧೇಂದ್ರಾರ್ಯ
ಸದ್ವೈಷ್ಣವಾಗ್ರಣಿ ಜಿತಾಮಿತ್ರ ಮುನಿವರರ ||7||

ರಘುನಂದನ ಸುರೇಂದ್ರ ವಿಜಯೀಂದ್ರ ಸುಧೀಂದ್ರ
ಸುಗುಣ ವಾರಿಧಿ ರಾಘವೇಂದ್ರಾರ್ಯರಾ
ನಿಗಮಾರ್ಥ ಕೋವಿದ ಸುಯೋಗೀಂದ್ರ ಸೂರೀಂದ್ರ
ಜಗತೀತಳದಿ ಪ್ರಸಿದ್ಧ ಸುಮತೀಂದ್ರರ ||8||

ಸಾಧುಜನಸನ್ನುತ ಉಪೇಂದ್ರರಾಯರ ವೇದ
ವೇದಾಂಗ ಚತುರ ವಾದೀಂದ್ರ ಯತಿಯಾ
ಭೇದಮತ ವಾರಿನಿಧಿ ಚಂದ್ರ ವಸುಧೇಂದ್ರ ವಿ
ದ್ಯಾದಾನಾಸಕ್ತ ವರದೇಂದ್ರ ಯತಿವರರ ||9||

ರಾಮವೇದವ್ಯಾಸರಂಘ್ರಿ ಕಮಲಗಳ ಹೃ
ತ್ತಾಮರಸದೊಳು ಪೂಜಿಸಿದ ಬಗೆಯನ್ನು
ಧೀಮಂತರಿಗೆ ತಿಳಿಸಲೋಸುಗದಿ ನವರತ್ನ
ಹೇಮ ಮಂಟಪ ವಿರಚಿಸಿದ ಭುವನೇಂದ್ರರಾ ||10||

ಪವಮಾನ ಮತ ಪ್ರವರ್ತಕರೊಳುತ್ತಮರೆನಿಪ
ಭವ ಗೆದ್ದಾ ಸುಬೋಧ ಸುಜನೇಂದ್ರರಾ
ಅವನಿತ ದೊಳಗೆ ಅಭ್ಯಧಿಕರನ ಮಾಡಿ ಸ
ತ್ಕವಿಗಳನೆ ಸಂತೈಸಲೆಂದು ಸ್ಥಾಪಿಸಿದವರಾ 1||11||

ಹರಿಯ ಸಂಸ್ಮರಣೆ ಅಹರ್ನಿಶಿಗಳಲಿ ಮಹ ವಿಪ
ತ್ಪರಿಹಾರಗೈಸುವುದು ಗುರುಗಳ ಸ್ಮರಣೇ
ಪರಮ ಸೌಖ್ಯವನೀವದಾದಾವ ಕಾಲದಲಿ
ಪೊರೆವ ಜಗನ್ನಾಥ ವಿಠ್ಠಲವೊಲಿದು ನಿರುತಾ||12||
***


smarisu guru santatiyanu manavE ||pa||

smarisu guru santatiya sarvakAlagaLalli
poreva hari caturavidha puruShArthagaLanittu ||a.pa||

parama haMsAKya hari gurutamanenisutippa
paramEShThi tatsutaru sanakAdyarA
karakamala sanjAta kUrmAsa j~jAnanidhi
guruDavAhana tIrtha kaivalya yativarara ||1||

j~jAnESa paratIrtha satya praj~ja prAj~ja
sUnu sutapOrAja varakumArA
maunikulavara acyuta prEkSharanGrigaLa
A namipenanavarata Bakti pUrvakadI ||2||

acCinna Bakta marutavatAra madhvamuni
prOccAbjanABa narahari mAdhavA
saccarita akShOBya munipa prativAdi BU
tOcCATanavagaida jayatIrtha guruvarara ||3||

vidyAdhirAja rAjEndra sutapOnidhi ja
yadhvajara puruShOttama brahmaNyarA
madhva siddhAnta sthApaka vyAsarAya pra
siddha SrInivAsayatigaLa pavitra pada ||4||

lakShmI kAntarana SrIpati rAmacaMdrarana
lakShmI vallaBa lakShmI nAthapatiyA
lakShmI nArAyaNara SrI raGunAtha su
BikShugaLa jagannAtha gurugaLanA ||5||

sAnurAgadali sarvOttamana mUrti vi
j~jAna pUrvaka Bajisi suKisutippA
SrInAtha guruvarara karakamalajAta vi
dyAnAtha yatigaLanu anudinadi mareyadale ||6||

vidhyAdhirAjara kavIndra vAgISara sva
siddhAnta sthApisida rAma caMdrA
advaita kumuda dinapa vibudhEMdrArya
sadvaiShNavAgraNi jitAmitra munivarara ||7||

raGunandana surEndra vijayIndra sudhIndra
suguNa vAridhi rAGavEndrAryarA
nigamArtha kOvida suyOgIndra sUrIndra
jagatItaLadi prasiddha sumatIMdrara ||8||

sAdhujanasannuta upEndrarAyara vEda
vEdAnga chatura vAdIndra yatiyA
BEdamata vArinidhi chandra vasudhEndra vi
dyAdAnAsakta varadEndra yativarara ||9||

rAmavEdavyAsaranGri kamalagaLa hRu
ttAmarasadoLu pUjisida bageyannu
dhImantarige tiLisalOsugadi navaratna
hEma manTapa viracisida BuvanEndrarA ||10||

pavamAna mata pravartakaroLuttamarenipa
Bava geddA subOdha sujanEndrarA
avanita doLage aByadhikarana mADi sa
tkavigaLane santaisalendu sthApisidavarA 1||11||

hariya saMsmaraNe aharniSigaLali maha vipa
tparihAragaisuvudu gurugaLa smaraNE
parama sauKyavanIvadAdAva kAladali
poreva jagannAtha viThThalavolidu nirutA||12||
***