Showing posts with label ಮಂಗಳಮಂಗಳಾತ್ಮಕಗೆ ಮಂಗಳ prasannavenkata. Show all posts
Showing posts with label ಮಂಗಳಮಂಗಳಾತ್ಮಕಗೆ ಮಂಗಳ prasannavenkata. Show all posts

Friday, 15 November 2019

ಮಂಗಳಮಂಗಳಾತ್ಮಕಗೆ ಮಂಗಳ ankita prasannavenkata

by ಪ್ರಸನ್ನವೆಂಕಟದಾಸರು
ಮಂಗಳ ಮಂಗಳಾತ್ಮಕಗೆ ಮಂಗಳ ಮಂಗಳಾನನಗೆಮಂಗಳ ಮಂಗಳದೇವಿಯರಸಗೆ ಪ.

ಮಿಸುನಿಯ ಹರಿವಾಣದಲ್ಲಿ ಹೊಸಮುತ್ತಿನಾರತಿ ನಿಲಿಸಿಬಿಸಜಗಂಧಿಯರು ಶ್ರೀಹರಿಗೆ ಜಯವೆನ್ನಿ 1

ಕುಂದಕುಟ್ಮಲರದನೆಯರು ಇಂದುಮಂಡಲವದನೆಯರುಸಿಂಧುಶಯನ ನಿತ್ಯನಿಗೆ ಜಯವೆನ್ನಿ 2

ರಂಭಾಸ್ತಂಭೋರು ಅಂಬುಜಕುಚಯುಗಳೆಯರುಅಂಬುಜಶರಜನಕಗೆ ಜಯವೆನ್ನಿ 3

ಪ್ರಾಗ್ಜೋತಿಷಧಿಪನರಿಗೆ ಪೂಗಣ್ಣಿಯ ಮನೋಹರಗೆನಾಗ್ಗನ್ನೆಯರ ದೇವಗೆ ಜಯವೆನ್ನಿ 4

ಸೌಂದರ್ಯಾತಿಶಯ ಪೂರಣಗೆ ಸೈಂಧವಹನನಕಾರಣಗೆತಂದೆ ಪ್ರಸನ್ನವೆಂಕಟೇಶಗೆ ಜಯವೆನ್ನಿ 5
******