.. ..
kruti by ವೀರನಾರಾಯಣ Veeranarayana
ಹನುಮ
ಅಣಿಯಾರೊ ನಿನಗೆ ಈ ತ್ರಿಭುವನದೊಳಗೆಹಣಮಂತ ಗುಣವಂತ ಮಣಿಯುವೆನೊ ನಿನಗೆ ಪ
ಗಡ್ ಗಡ್ಗಡನೆ ರಾಮನ ಪಾದಾಂಬುಜಕೆ ವಂದಿಸುತಖಡ್ ಖಡ್ ಖಡನೆ ಸಿಡಿಲಂತೆ ನಭದೊಳಗೆ ಗರ್ಜಿಸುತಧಡ್ ಧಡ್ ಧಡನೆ ಕಡಲನ್ನೆ ಜಿಗಿಯುತ್ತ ಭಡ್ ಭಡ್ ಭಡನೆ ಸೀತೆಯನು ಶೋಧಿಸುತ ಬಂದಿಯೋ 1
ಬರಬರನೆ ಬಿಂಕದಲಿ ಉರಿಯುತಿಹ ರಕ್ಕಸರದರ್ ದರ್ ದರನೆ ರಣರಂಗಕೊಬ್ಬನೇ ಎಳೆತಂದುಕರ್ ಕರ್ ಕರನೆ ಹಲ್ಗಿಡಿದು ತರಿಯುತ್ತ ಧರೆಯೊಳಗೆಭರ್ ಭರನೆ ಸಿರಿವರನ ಇಚ್ಛೆಯನು ಪೂರ್ತಿಸಿದಿ 2
ಖುದ್ ಖುದ್ ಖುದನೆ ನಗುತ ರಘುರಾಮನನು ಹೃದಯದೊಳುಖುದ್ ಖುದ್ ಖುದನೆ ಬಿಡದೇಳ್ವ ಭಕುತಿಯಲಿ ಸೇವಿಸುತಗದ್ ಗದ್ ಗದುಗಿನೊಳು ವೀರನಾರಾಯಣನಮುದ್ ಮುದ್ ವಂದಿಸಿ ಪರಬ್ರಹ್ಮನ ಪದವಿಯನೆ ಪಡೆಯೊ3
***