by ನಿಡಗುರುಕಿ ಜೀವೂಬಾಯಿ
ಔತುಕೊಂಡಿ ಯಾಕೊ ನರಹರಿ ಪ್ರಾರ್ಥನೆಯನ್ನು ಕೇಳೊ ಸ್ವಾಮಿ ಪ
ವೇದ ತಂದುಭಾರಪೊತ್ತುಕೋರೆ ತೋರಿ ಕರುಳ ಬಗೆದುಬೇಡಿ ಭೂಮಿ ದೂಡಿನೃಪರಸಾಗರವ ಬಂಧಿಸಿದ ಭಯವೋ 1
ಕದ್ದು ಬೆಣ್ಣೆ ಕಳ್ಳನೆನಿಸಿವದ್ದು ತ್ರಿಪುರಾಸುರರ ಸದೆದುಹದ್ದನೇರುವುದನೆ ಬಿಟ್ಟುಹಯವನೇರಿದ ಭಯವೋ ಸ್ವಾಮಿ 2
ತರಳಗೊಲಿದು ಬರಲು ನಿನ್ನಇರಿಸಿ ಸ್ನಾನಕೆನುತ ಪೋಗಿತ್ವರದಿ ಬಂದು ನೋಡಲು ಅದ್ಭುತದಿ ಬೆಳೆದ ಭಯವೋ ದೇವ 3
ನಿಲುಕದಿರಲು ನಿನ್ನವದನಯುವಕ ನೋಡಿ ಮೊರೆಯನಿಡಲುತವಕಿಸುವಿ ಬಾಲಕನೆ ನಿನ್ನಸಮಕೆ ಎನ್ನ ಮಾಡಿಕೊ ಎಂದು 4
ಸಿರದಿ ಕರವನಿಡುತ ತನ್ನಸಮಕೆ ಬರುವ ತೆರದಿ ನಿನ್ನಸಿರವ ಪಿಡಿದು ಬಿತ್ತಿ ಸ್ತುತಿಸೆಕುಳಿತೆ ಕೂಡಲಿಯ ತೀರದಲಿ 5
ಭಕ್ತರೆಲ್ಲ ನೆರೆದು ನಿನ್ನಭಕ್ತಿಪಾಶದಿಂದ ಬಿಗಿದುಇಚ್ಛೆ ಬಂದ ತೆರದಿ ಕುಣಿಸೆಮೆಚ್ಚಿಅವರಪೊರೆವೆ ದೇವ6
ಬಂದ ಜನರು ಛಂದದಿಂದತುಂಗಭದ್ರೆ ಸಂಗಮದಲಿಮಿಂದು ನಿನ್ನ ವಂದಿಸುವರೊತಂದೆ ಕಮಲನಾಭವಿಠ್ಠಲ 7
****