Showing posts with label ಕರುಣಿಸೋ ಗೌರೀಕರಜ ಕರುಣಾಳು ಕ್ಷಿಪ್ರ ಮನದ narahari P. Show all posts
Showing posts with label ಕರುಣಿಸೋ ಗೌರೀಕರಜ ಕರುಣಾಳು ಕ್ಷಿಪ್ರ ಮನದ narahari P. Show all posts

Thursday, 5 August 2021

ಕರುಣಿಸೋ ಗೌರೀಕರಜ ಕರುಣಾಳು ಕ್ಷಿಪ್ರ ಮನದ ankita narahari P

 ..


kruti by pradyumna teertha ಪ್ರದ್ಯುಮ್ನತೀರ್ಥರು

ಗಣೇಶಸ್ತುತಿ

ಕರುಣಿಸೋ ಗೌರೀಕರಜ ಪ

ಕರುಣಾಳು ಕ್ಷಿಪ್ರ ಮನದ
ತರುಣಾರ್ಕ ವಸನ ಕಾಯ ಬೇಗದಿ ಅ.ಪ

ಅರಿಪಾಣಿ ಕಾಯ ಜಾತ
ಅರಿವರ್ಗಗಳಿಗೆ ವಿಘ್ನವ
ತ್ವರದಲ್ಲಿ ಇತ್ತು ಶುಭಕೆ ಮಾರ್ಗವ 1

ನರಭಾವದಿಂದ ನಿನ್ನ
ಮರೆತರೆ ನೀನು ಎನ್ನನು
ಜರಿದರೆ ಪೊರೆವೊರ್ಯಾರೊ ನಿರುತದಿ 2

ಮರುದಂಶ ಮಧ್ವಮುನಿಯ
ವರಶಾಸ್ತ್ರ ಪೇಳ್ವ ಬುದ್ಧಿಯ
ವರವಿತ್ತು ಬಂದ ವಿಘ್ನವ ಕಳೆಯುತ 3

ವರಪಾಶಪಾಣಿ ಎನ್ನ
ದುರಿತಾಶಪಾಶ ಛೇದಿಸಿ
ಹರಿ ಭಕ್ತಿ ಪಾಶದಿಂದ ಬಿಗಿಯುತ 4

ಕರಿವಕ್ತ್ರಶಂಕೆ ಎಂಬ
ಕರಿಯನ್ನು ಅಂಕುಶದಲಿ
ಮುರಿಬಿಂಕ ಶಂಕಿಸದೆ ವಿದ್ಯವ 5

ಮುರವೈರಿ ವಾಯು ಶಂಭೂ
ಸಿರಿ ವಾಣಿ ಚಂಡಿಕಾದ್ಯರು
ನಿರುತದಿ ಇದ್ದು ವರವ ಬೀರ್ವರು 6

ನರವಾಹ ವಾಯುಜರಿಗೆ
ಸರಿ ಎಂಬೋ ಜ್ಞಾನದಿ
ಶ್ರೀ ನರಹರಿ ಪಾದ ತೋರಿ ಬೇಗನೆ 7
***