Showing posts with label ಮಾಡಿದ ತಪ್ಪು ಕೈ ಜೋಡಿಸಿ ಪೇಳ್ವೆ ಕಾಪಾಡೆನ್ನ hanumesha vittala. Show all posts
Showing posts with label ಮಾಡಿದ ತಪ್ಪು ಕೈ ಜೋಡಿಸಿ ಪೇಳ್ವೆ ಕಾಪಾಡೆನ್ನ hanumesha vittala. Show all posts

Tuesday, 1 June 2021

ಮಾಡಿದ ತಪ್ಪು ಕೈ ಜೋಡಿಸಿ ಪೇಳ್ವೆ ಕಾಪಾಡೆನ್ನ ankita hanumesha vittala

ಮಾಡಿದ ತಪ್ಪು ಕೈ ಜೋಡಿಸಿ ಪೇಳ್ವೆ ಕಾಪಾಡೆನ್ನ

ಗಾಢದಿಂ ಹರಿಯೇ ಪ


ಉದಯದಲೆದ್ದು ಗೊಡ್ಡ ಹರಟೆಯ ಹೊಡೆದು

ಹರಿಸದನಕ್ಕೆ ಹೋಗದ ತಪ್ಪು

ಮುದದಿಂದಲಿ ಗಂಗಾ ಉದಕ ಅಗ್ರೋದಕ ಮರೆದು

ತಾರದೇ ಬಿಟ್ಟ ತಪ್ಪು

ಸದಮಲಸುಜ್ಞಾನದಿ ಹರಿ ಕೀರ್ತನೆ ಕೇಳದೆ ಬಿಟ್ಟೆನ್ನ ತಪ್ಪು 1


ಸ್ನಾನ ಜಪವನು ಬಿಟ್ಟು ಕುಪಿತನಾಗಿ ಕಪಿಯಂತೆ ತಿರುಗಿದ ತಪ್ಪು

ಅಪರಿಮಿತ ದ್ರವ್ಯ ಅಪಹರಿಸಿ ಕೆಟ್ಟ ಅಪಕೀರ್ತಿ ಹೊತ್ತೆನ್ನ ತಪ್ಪು

ಶ್ವಪಚನಾಗಿ ಅನುದಿನ ಸ್ನಾನ ಸಂಧ್ಯಾದಿಗಳನು ಬಿಟ್ಟ ತಪ್ಪು 2


ಮನಿ ಮನಿ ತಿರುಗಿದ ತಪ್ಪು ತನು ಸುಖಕಾಗಿ ವನಿತೇರ ರಮಿಸಿನಾ

ಘನ ಪಾಪ ಮಾಡಿದ ತಪ್ಪು

ಅನುದಿನದಲಿ ಹನುಮೇಶ ವಿಠಲನ ನೆನೆಯದೆ ಬಿಟ್ಟ ತಪ್ಪು 3

*****