ಮಾಡಿದ ತಪ್ಪು ಕೈ ಜೋಡಿಸಿ ಪೇಳ್ವೆ ಕಾಪಾಡೆನ್ನ
ಗಾಢದಿಂ ಹರಿಯೇ ಪ
ಉದಯದಲೆದ್ದು ಗೊಡ್ಡ ಹರಟೆಯ ಹೊಡೆದು
ಹರಿಸದನಕ್ಕೆ ಹೋಗದ ತಪ್ಪು
ಮುದದಿಂದಲಿ ಗಂಗಾ ಉದಕ ಅಗ್ರೋದಕ ಮರೆದು
ತಾರದೇ ಬಿಟ್ಟ ತಪ್ಪು
ಸದಮಲಸುಜ್ಞಾನದಿ ಹರಿ ಕೀರ್ತನೆ ಕೇಳದೆ ಬಿಟ್ಟೆನ್ನ ತಪ್ಪು 1
ಸ್ನಾನ ಜಪವನು ಬಿಟ್ಟು ಕುಪಿತನಾಗಿ ಕಪಿಯಂತೆ ತಿರುಗಿದ ತಪ್ಪು
ಅಪರಿಮಿತ ದ್ರವ್ಯ ಅಪಹರಿಸಿ ಕೆಟ್ಟ ಅಪಕೀರ್ತಿ ಹೊತ್ತೆನ್ನ ತಪ್ಪು
ಶ್ವಪಚನಾಗಿ ಅನುದಿನ ಸ್ನಾನ ಸಂಧ್ಯಾದಿಗಳನು ಬಿಟ್ಟ ತಪ್ಪು 2
ಮನಿ ಮನಿ ತಿರುಗಿದ ತಪ್ಪು ತನು ಸುಖಕಾಗಿ ವನಿತೇರ ರಮಿಸಿನಾ
ಘನ ಪಾಪ ಮಾಡಿದ ತಪ್ಪು
ಅನುದಿನದಲಿ ಹನುಮೇಶ ವಿಠಲನ ನೆನೆಯದೆ ಬಿಟ್ಟ ತಪ್ಪು 3
*****
No comments:
Post a Comment