ಗುರು ಸತ್ಯಬೋಧ ಯತೀಂದ್ರಗಿನ್ನು ||pa||
ಬಲು ಸುಂದರ ಸೀತಾ ರಘುಪತಿ ಪಾದನಳಿನಯುಗ್ಮವ ಪೂಜಿಪ ಯತಿ
ಎಮಗೊಲಿದು ಪಾಲಿಸುವನು ಸನ್ಮತಿ ಈಜಲಜ ಭವಾಂಡದೊಳ್ ತುಂಬಿರೆ ಕೀರುತಿ ||1||
ಪೀಳಿಗೆ ರಾಮ ದಿಗ್ವಿಜಯ ರಾಮ ಸಿರಿಲೋಲ ವಿಠ್ಠಲ ವ್ಯಾಸ ಕೂರ್ಮ
ಕಮಲಾಲಯ ದೇವಿಯ ಸಿರಿನಾಮ ದಿಂದವಾಲಗವೀಯುವ ಗುರು ಸಾರ್ವಭೌಮಗೆ||2||
ಯತಿವರ ಶ್ರೀ ಸತ್ಯಪ್ರಿಯರ ಕರಶತಪತ್ರ ಭವ ಭಕ್ತರಾಧಾರ
ಮನ್ಮಥನ ಮಾರ್ಗಣ ಗೆದ್ದ ಗಂಭೀರ ರತಿಪತಿ ಪಿತ ಮೋಹನ ವಿಠ್ಠಲ ಕಿಂಕರಗೆ ||3|
**********