Showing posts with label ಜತನ ಮಾಡೊ ಜೀವನವ ಮುಂದೆ purandara vittala. Show all posts
Showing posts with label ಜತನ ಮಾಡೊ ಜೀವನವ ಮುಂದೆ purandara vittala. Show all posts

Saturday, 7 December 2019

ಜತನ ಮಾಡೊ ಜೀವನವ ಮುಂದೆ purandara vittala

ರಾಗ ಬೇಗಡೆ ಅಟತಾಳ

ಜತನ ಮಾಡೊ ಜೀವನವ, ಮುಂದೆ
ಮತಿಭ್ರಷ್ಟವಾಗಿ ನೀ ಕೆಡಬೇಡ ಮನುಜ ||ಪ||

ಅಸ್ಥಿ ಮಲ ಮಾಂಸಾದಿ ಮೂತ್ರ , ಅದರ
ಸುತ್ತಿಕೊಂಡಿರೋದು ಅಮರ ಬಳ್ಳಿ
ಇಟ್ಟಾಡೆಯಲಿ ಬಾಹೋ ರಭಸ , ಅದರ
ಹುಟ್ಟು ನೋಡಿದರೆ ಕುಂಬಾರನ ತಿಮಿರಿ ||

ಹಿಂದೆ ತಗರು ಮುಂದೆ ಭಾವಿ , ಅದರ
ಸಂದಣಿಸುವ ಎಡಬಲದಿ ಮದ್ದಾನೆ
ಒಂದಕ್ಕೆ ಒಂದು ಸಾಧನವ , ಅದರ
ಮುಂದೆ ನೋಡಿದರೆ ತಾನದಸೋನೆ ||

ಹಮ್ಮು ಹಂಕಾರ ಈಡ್ಯಾಡು , ಪರ-
ಬೊಮ್ಮಾನಂದದಲ್ಲಿ ತೇಲಿ ಮುಣುಗಾಡು
ನಿನ್ನಲ್ಲಿ ನೀ ತಿಳಿದು ನೋಡು , ಪ್ರ-
ಸನ್ನ ಶ್ರೀಪುರಂದರವಿಠಲನ್ನ ಕೂಡು ||
***

pallavi

jatana mADO jIvanava mati bhraSTanAgi nI keDabEDa manuja

caraNam 1

asthi mala mAmsAdi mUtra adara sutti koNDiruvOdu Amarada baLLi
iTTADEyali bAhO rabhasa adara huTTu nODidare kumbArana timiri

caraNam 2

hinde tagaru munde bAvi adara sandaNisuva eDabaladi maddAne
ondakke ondu sAdhanava adara munde nODidare tAnadasOne

caraNam 3

hammu hankAra IdyADu para bommanandadalli tEli muNugADu
ninnalli nI tiLidu nODu prasanna shrI purandara viTTalanna kUDu
***