Showing posts with label ರಾಮಾ ರಘುವೀರ ನಾಮಾಮೃತವ ಪಾಲಿಸು mahidhara. Show all posts
Showing posts with label ರಾಮಾ ರಘುವೀರ ನಾಮಾಮೃತವ ಪಾಲಿಸು mahidhara. Show all posts

Wednesday, 1 September 2021

ರಾಮಾ ರಘುವೀರ ನಾಮಾಮೃತವ ಪಾಲಿಸು ankita mahidhara

ಶ್ರೀ ತುಪಾಕಿ ವೆಂಕಟರಾಮಾಚಾರ್ಯರ ಕೃತಿ


ರಾಗ - : ತಾಳ -


ರಾಮಾ ರಘುವೀರ ನಾಮಾಮೃತವ ಪಾಲಿಸು

ವಾಮಾಂಗಿಕೃತರಾಮ ಸೋಮಧರ ಕಾಮದ ಕೈರವಧಾಮ ನಿರಾಮಯ ll ಪ ll


ಕಾಮಧೇನು ಕಲ್ಪತರು ಚಿಂ-

ತಾಮಣಿ ನೀನಪ್ಪ

ತಾಮಸಜನ ನೀರ್ಧೂಮ ಜನಕಜಾ

ಕಾಮ ಸಕಲ ಗುಣಧಾಮಧೀಶ್ವರ ll 1 ll


ಕಂಜಾಯತನಯನ ಗುರು ಪ್ರಾ-

ಭಂಜನಿ ಭುಜಗಮನ

ಮಂಜುಳ ಸಿಜಂನ್ಮಂಜೀದ್ವಯ

ರಂಜಿತ ಪದ ಭಕ್ತಾಂಜಲಿ ಫಲದಾ ll 2 ll


ಮಂಗಲತರರೂಪ ಸೀತಾ-

ಲಿಂಗನ ಹೃತತಾಪ

ಇಂಗಿತ ಫಲದ ಭುಜಂಗಮಹೀಧರ

ಶೃಂಗವಾನ ಮಾತಂಗ ಭಯಾವಹ ll 3 ll

***