Showing posts with label ಎಂದು ಕಾಂಬುವೆ ನಿನ್ನ ಚರಣ ನಾರಾಯಣ gadugina veeranarayana. Show all posts
Showing posts with label ಎಂದು ಕಾಂಬುವೆ ನಿನ್ನ ಚರಣ ನಾರಾಯಣ gadugina veeranarayana. Show all posts

Wednesday, 1 September 2021

ಎಂದು ಕಾಂಬುವೆ ನಿನ್ನ ಚರಣ ನಾರಾಯಣ ankita gadugina veeranarayana

..

kruti by ವೀರನಾರಾಯಣ Veeranarayana 


ಎಂದು ಕಾಂಬುವೆ ನಿನ್ನ ಚರಣ ನಾರಾಯಣ

ತಂದು ತೋರಯ್ಯ ನಾ ಬಂದೆನು ಶರಣ ಪ


ಇಂದ್ರ ಸುರಮುನಿವಂದ್ಯ ಚರಣಾ _ನಂದ ಗುಣ ಸಂಪೂರಣಒಂದೆ ಮನದಲಿ ಮಾಳ್ಪೆ ಸ್ಮರಣಾಬಂಧು ತೋರೈ ನಿನ್ನ ಚರಣಾ ಅ.ಪ.


ಚಾರು ಲಕ್ಷ್ಮೀಯು ನಿತ್ಯ ಒತ್ತುವ ಚರಣತೋರ ಗಂಗೆಗೆ ಜನ್ಮ ಕೊಟ್ಟಂಥ ಚರಣಮೂರು ಲೋಕವ ಹಿಡಿದ ಚರಣನಾರಿ ಅಹಲ್ಯೆಯ ಪೊರೆದ ಚರಣ 1


ಪ್ರ್ರಳಯ ಕಾಲದಿ ನೆಕ್ಕುತಿಹ ಚಿಕ್ಕ ಚರಣಇಳೆಗೆ ಸುಯೋಧನನಿಳಿಸಿದ ಚರಣಎಳೆಯ ಧ್ರುವ ತಾ ಕಂಡ ಚರಣತುಳಸಿ ವನದಲಿ ಕುಣಿದ ಚರಣಸುಳಿದು ಭಕ್ತರ ಪೊರೆವ ಚರಣ 2


ಅಖಿಲಾಂಡದ ಸೃಷ್ಟಿ ಸ್ಥಿತಿ ಲಯ ಕಾರಣಭಕುತರು ಕರೆಯಲೋಡುವ ದಿವ್ಯ ಚರಣಶಕಟ ದೈತ್ಯನ ಒದೆದ ಚರಣಯುಕುತಿ ಶಕುತಿಗೆ ಬರದ ಚರಣಯುಕುತಿ ಪಥವನು ತೋರ್ಪ ಚರಣಪ್ರಖರ ಗದುಗಿನ ವೀರನಾರಾಯಣ 3

***