ವಿಜಯದಾಸ
ಆನಂದನ ನಂದನೊಲಿಯೆ ಏನಂದದ್ದೆ ವೇದ ವೃಂದಾ ಪ
'ಅ'ಮೊದಲು 'ಕ'್ಷ ಕಾರಾಂತ ಈ ಮಹಾವರ್ಣಗಳೆಲ್ಲ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ 1
ಪೋಪದು ಬರುತಿಪ್ಪುದು ಕೋಪಶಾಣಿ ಮಾಡುವುದು
ರೂಪ ಲಾವಣ್ಯವು ಹರಿವ್ಯಾಪಾರವೆಂದವರಿಗೆ 2
ಪಾವಕ ವಾಯು ತರು
ಫಲಪುಷ್ಪ ಬಳ್ಳಿಲಿ ಹರಿ ಒಳಗೆ ವ್ಯಾಪ್ತನೆಂದವಗೆ 3
ತಾರೊ ಬಾರೊ ಬೀರೊ ಸಾರೊ ಮಾರೊ ಕೋರೊ ಹಾರೊ
ಹೋರೊ ಸೇರೊ ಕೋರೊದೆಂಬ ದಿಶಾಪ್ರೇರಣೆ ಎಂದವರಿಗೆ 4
ಮಧ್ವಶಾಸ್ತ್ರ ಪ್ರವಚನ ಮುದ್ದುಕೃಷ್ಣನ ದರುಶನ
ಸಿದ್ಧ ವಿಜಯವಿಠ್ಠಲನ ಪೊಂದಿ ಕೊಂಡಾಡುವವರಿಗೆ 5
********
ಆನಂದನ ನಂದನೊಲಿಯೆ ಏನಂದದ್ದೆ ವೇದ ವೃಂದಾ ಪ
'ಅ'ಮೊದಲು 'ಕ'್ಷ ಕಾರಾಂತ ಈ ಮಹಾವರ್ಣಗಳೆಲ್ಲ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ 1
ಪೋಪದು ಬರುತಿಪ್ಪುದು ಕೋಪಶಾಣಿ ಮಾಡುವುದು
ರೂಪ ಲಾವಣ್ಯವು ಹರಿವ್ಯಾಪಾರವೆಂದವರಿಗೆ 2
ಪಾವಕ ವಾಯು ತರು
ಫಲಪುಷ್ಪ ಬಳ್ಳಿಲಿ ಹರಿ ಒಳಗೆ ವ್ಯಾಪ್ತನೆಂದವಗೆ 3
ತಾರೊ ಬಾರೊ ಬೀರೊ ಸಾರೊ ಮಾರೊ ಕೋರೊ ಹಾರೊ
ಹೋರೊ ಸೇರೊ ಕೋರೊದೆಂಬ ದಿಶಾಪ್ರೇರಣೆ ಎಂದವರಿಗೆ 4
ಮಧ್ವಶಾಸ್ತ್ರ ಪ್ರವಚನ ಮುದ್ದುಕೃಷ್ಣನ ದರುಶನ
ಸಿದ್ಧ ವಿಜಯವಿಠ್ಠಲನ ಪೊಂದಿ ಕೊಂಡಾಡುವವರಿಗೆ 5
********