ಕಾಖಂಡಕಿ ಶ್ರೀ ಮಹಿಪತಿರಾಯರು
ಸದ್ಗುರುವಿನ ಕೈಯ ಸದ್ಗೈಸಿಕೊಂಡವಗೆ ಜಯ ಪ
ಭಾವ ಬಲಿದು ಶುದ್ಧ ಪವಿತ್ರವಾದ ಪ್ರಬುದ್ಧ ಅವ ನೋಡಿ ತಾ ಸ್ವತ:ಸಿದ್ಧ ಭವದಾಟಿದ್ದ 1
ಸದ್ಗುರು ಸುದಯದೀಕ್ಷ ಸಾಧಿಸಿತವಗೆ ಲಕ್ಷ ಮೇದಿನಿಯೋಳಗೆ ಸುಭಿಕ್ಷ ಬೋಧಕ ಸುಪಕ್ಷ 2
ಸದ್ಗತಿ ಸುಖಸ್ವಾದ ಸಾಧಿಸಿ ಮಹಿಪತಿ ಬೋಧ ಹೊಂದಿ ತೋರಿತು ಸೌಖ್ಯದ ಸದ್ಗುರು ಪ್ರಸಾದ 3
***