Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ಭಯ ವಿನಾಶನದೇವ gopalakrishna vittala. Show all posts
Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ಭಯ ವಿನಾಶನದೇವ gopalakrishna vittala. Show all posts

Wednesday, 1 December 2021

ಜಯ ಮಂಗಳಂ ನಿತ್ಯ ಶುಭ ಮಂಗಳಂ ಭಯ ವಿನಾಶ ankita gopalakrishna vittala JAYA MANGALAM NITYA SHUBHA MANGALAM BHAYA VINAASHA



ಜಯ ಮಂಗಳಂ ನಿತ್ಯ ಶುಭ ಮಂಗಳಂ

ಭಯ ವಿನಾಶನದೇವ ಶ್ರೀನಿವಾಸನಿಗೆ ಪ.


ಮಂಗಳಂ ಜಲಚರಗೆ ಮಂಗಳಂ ಗಿರಿಧರಗೆ

ಮಂಗಳಂ ಭೂದೇವಿ ರಕ್ಷಕನಿಗೆ

ಮಂಗಳಂ ನರಹರಿಗೆ ಮಂಗಳಂ ಮಾಣವಗೆ

ಮಂಗಳಂ ಭಾರ್ಗವಗೆ ದಾಶರಥಿಗೆ 1


ಮಂಗಳಂ ಗೋಪಾಂಗನೆಯರ ಕಾಯ್ದವನಿಗೆ

ಮಂಗಳಂ ತ್ರಿಪುರ ಸುರರಳಿದ ಹರಿಗೆ

ಮಂಗಳಂ ಹಯವೇರಿ ಕಲಿಮುಖರ ಗೆಲಿದವಗೆ

ಮಂಗಳಂ ಶ್ರೀಕೃಷ್ಣ ಶ್ರೀನಿವಾಸನಿಗೆ 2


ಆಪಾದಮೌಳಿ ಪಾವನರೂಪನಿಗೆ

ಆಪನ್ನ ರಕ್ಷಕಗೆ ಆದಿರೂಪನಿಗೆ

ಆಪದ್ಭಾಂಧವ ಶ್ರೀಗುರುಗಳಂತರ್ಗತಗೆ 

ಗೋಪಾಲಕೃಷ್ಣವಿಠ್ಠಲಮೂರ್ತಿಗೆ 3

****