Showing posts with label ಆವಳಂಜಿಸಿದಳವಳು ಪೇಳು ರಂಗಮ್ಮಾ ನಾ prasannavenkata. Show all posts
Showing posts with label ಆವಳಂಜಿಸಿದಳವಳು ಪೇಳು ರಂಗಮ್ಮಾ ನಾ prasannavenkata. Show all posts

Monday, 18 November 2019

ಆವಳಂಜಿಸಿದಳವಳು ಪೇಳು ರಂಗಮ್ಮಾ ನಾ ankita prasannavenkata


ಪ್ರಸನ್ನ ವೆಂಕಟದಾಸರು
ರಾಗ : ಶ್ರೀ ತಾಳ : ತ್ರಿಪುಟ

ಆವಳಂಜಿಸಿದಳವಳು ಪೇಳು ರಂಗಮ್ಮಾ ನಾ
ನವಳ ಗಾರುಮಾಡುವೆ ನಡೆ ಕೃಷ್ಣಮ್ಮಾ                ||ಪ||

ದೂರುವಿರ‍್ಯಾದರೆ ಮಗನ ಹಾದಿಗೆ ಹೋಗದಿರಿ ಎಂದು
ಸಾರಿಕೈಯ ಕಡ್ಡಿಕೊಟ್ಟೆ ಜಾರೆಯರಿಗೆ
ಸಾರಿಸಾರಿಗೆನ್ನ ಮನ ರಟ್ಟು ಮಾಡುವ ಮಾತೇನು
ಆರಿಗೆ ಮಕ್ಕಳಿಲ್ಲೆ ನಾನೇ ಹಡದವಳೇನೋ                ||೧||

ಇದ್ದರಿರಲೀ ಕೂಸಿನ ಆಡುವಾಟಕೊಪ್ಪಿದರೆ
ಎದ್ದು ಹೋಗೆಮ್ದರೆ ಹೋಗಲಿಲ್ಲ ಪಳ್ಳಿಂದಾ
ಕದ್ದು ತಿಂದನೆಂಬ ಸುಳ್ಳು ಸುದ್ದಿಗೆ ಕಾರಣವೇನೋ
ಮುದ್ದೆಬೆಣ್ಣೆ ಕೈಯಲಿತ್ತಾರೊಲ್ಲದೆ ಚಲ್ಲುವ ಕಂದಗ        ||೨||

ಏನು ಪುಣ್ಯರಾಶಿ ಕೂಡಿತೆಂದು ನಿನ್ನಾಟವ ನೋಡಿ
ಬೀಸಿ ಬಿಗಿದಪ್ಪುವಂಥ ಭಾಗ್ಯವನುಂಡೆ
ಕೂಸೆ ನಿನ್ನ ಕಂಡಸೂಯಾ ಬಡುವಾರ ಅಳಿಯಲಮ್ಮಾ
ದಾಸರಿಂಗೆ ಲೇಸಾಗಲಿ ಪ್ರಸನ್ನವೆಂಕಟ ಕೃಷ್ಣಾ                ||೩||
***

Avalanjisidalavalu pelu rangamma nanavala
Garumaduve nade krushnamma ||pa||

Duruvir^yadare magana hadige hogadiri endu
Sarikaiya kaddikotte jareyarige
Sarisarigenna mana rattu maduva matenu
Arige makkalille nane hadadavaleno ||1||

Iddarirali kusina aduvatakoppidare
Eddu hogemdare hogalilla pallinda
Kaddu timdanemba sullu suddige karanaveno
Muddebenne kaiyalittarollade calluva kandaga ||2||

Enu punyarasi kuditendu ninnatava nodi
Bisi bigidappuvantha bagyavanunde
Kuse ninna kandasuya baduvara aliyalamma
Dasaringe lesagali prasannavenkata krushna ||3||
***

ಪ್ರಸನ್ನವೆಂಕಟದಾಸರು
ಆವಳಂಜಿಸಿದವಳು ಪೇಳು ರಂಗಮ್ಮ 
ನಾನವಳಗಾರುಮಾಡುವೆ ನಡೆ ಕೃಷ್ಣಮ್ಮಪ.

ದೂರುವಿರಾದರೆ ಮಗನ ದಾರಿಗೆ ಹೋಗದಿರಿ 
ಎಂದುಸಾರಿ ಕೈಯಕಡ್ಡಿಕೊಟ್ಟೆ ಜಾರೆಯರಿಗೆಸಾರಿ 
ಸಾರಿಗೆ ನಿನ್ನನು ರಟ್ಟು ಮಾಡುವ ಮಾತೇನುಆರಿಗೆ 
ಮಕ್ಕಳಿಲ್ಲೇನೊ ನಾನೇ ಹಡೆದವಳೇನೊ 1

ಇದ್ದರಿರಲಿ ಕೂಸಿನ ಆಡುವಾಟಕೊಪ್ಪಿದರೆಎದ್ದು 
ಹೋದರೆ ಹೋಗಲಿ ಆವಪಳ್ಳಿಂದಕದ್ದು 
ತಿಂದನೆಂದಾವಾಗ ಕೂಗುವ ಕಾರಣವೇನೊಮುದ್ದೆ 
ಬೆಣ್ಣೆ ಕೈಯಲಿತ್ತರೊಲ್ಲದೆ ಚೆಲ್ಲುವೆ ಕಂದ 2

ಏಸುಪುಣ್ಯರಾಶಿ ಕೂಡಿತೆಂದು ನಿನ್ನಾಟವ 
ನೋಡಿಬೀಸಿ ಬಿಗಿದಪ್ಪುವಂಥ ಭಾಗ್ಯವನುಂಡೆಕೂಸೆ 
ನಿನ್ನ ಕಂಡಸೂಯೆಬಡುವರಳಿಯಲಮ್ಮದಾಸರಿಗೆ 
ಲೇಸಾಗಲಿ ಪ್ರಸನ್ವೆಂಕಟ ಕೃಷ್ಣ 3

*******