ಪ್ರಸನ್ನ ವೆಂಕಟದಾಸರು
ರಾಗ : ಶ್ರೀ ತಾಳ : ತ್ರಿಪುಟ
ಆವಳಂಜಿಸಿದಳವಳು ಪೇಳು ರಂಗಮ್ಮಾ ನಾ
ನವಳ ಗಾರುಮಾಡುವೆ ನಡೆ ಕೃಷ್ಣಮ್ಮಾ ||ಪ||
ದೂರುವಿರ‍್ಯಾದರೆ ಮಗನ ಹಾದಿಗೆ ಹೋಗದಿರಿ ಎಂದು
ಸಾರಿಕೈಯ ಕಡ್ಡಿಕೊಟ್ಟೆ ಜಾರೆಯರಿಗೆ
ಸಾರಿಸಾರಿಗೆನ್ನ ಮನ ರಟ್ಟು ಮಾಡುವ ಮಾತೇನು
ಆರಿಗೆ ಮಕ್ಕಳಿಲ್ಲೆ ನಾನೇ ಹಡದವಳೇನೋ ||೧||
ಇದ್ದರಿರಲೀ ಕೂಸಿನ ಆಡುವಾಟಕೊಪ್ಪಿದರೆ
ಎದ್ದು ಹೋಗೆಮ್ದರೆ ಹೋಗಲಿಲ್ಲ ಪಳ್ಳಿಂದಾ
ಕದ್ದು ತಿಂದನೆಂಬ ಸುಳ್ಳು ಸುದ್ದಿಗೆ ಕಾರಣವೇನೋ
ಮುದ್ದೆಬೆಣ್ಣೆ ಕೈಯಲಿತ್ತಾರೊಲ್ಲದೆ ಚಲ್ಲುವ ಕಂದಗ ||೨||
ಏನು ಪುಣ್ಯರಾಶಿ ಕೂಡಿತೆಂದು ನಿನ್ನಾಟವ ನೋಡಿ
ಬೀಸಿ ಬಿಗಿದಪ್ಪುವಂಥ ಭಾಗ್ಯವನುಂಡೆ
ಕೂಸೆ ನಿನ್ನ ಕಂಡಸೂಯಾ ಬಡುವಾರ ಅಳಿಯಲಮ್ಮಾ
ದಾಸರಿಂಗೆ ಲೇಸಾಗಲಿ ಪ್ರಸನ್ನವೆಂಕಟ ಕೃಷ್ಣಾ ||೩||
***
Avalanjisidalavalu pelu rangamma nanavala
Garumaduve nade krushnamma ||pa||
Duruvir^yadare magana hadige hogadiri endu
Sarikaiya kaddikotte jareyarige
Sarisarigenna mana rattu maduva matenu
Arige makkalille nane hadadavaleno ||1||
Iddarirali kusina aduvatakoppidare
Eddu hogemdare hogalilla pallinda
Kaddu timdanemba sullu suddige karanaveno
Muddebenne kaiyalittarollade calluva kandaga ||2||
Enu punyarasi kuditendu ninnatava nodi
Bisi bigidappuvantha bagyavanunde
Kuse ninna kandasuya baduvara aliyalamma
Dasaringe lesagali prasannavenkata krushna ||3||
***
ಪ್ರಸನ್ನವೆಂಕಟದಾಸರು
ಆವಳಂಜಿಸಿದವಳು ಪೇಳು ರಂಗಮ್ಮ
ನಾನವಳಗಾರುಮಾಡುವೆ ನಡೆ ಕೃಷ್ಣಮ್ಮಪ.
ದೂರುವಿರಾದರೆ ಮಗನ ದಾರಿಗೆ ಹೋಗದಿರಿ
ಎಂದುಸಾರಿ ಕೈಯಕಡ್ಡಿಕೊಟ್ಟೆ ಜಾರೆಯರಿಗೆಸಾರಿ
ಸಾರಿಗೆ ನಿನ್ನನು ರಟ್ಟು ಮಾಡುವ ಮಾತೇನುಆರಿಗೆ
ಮಕ್ಕಳಿಲ್ಲೇನೊ ನಾನೇ ಹಡೆದವಳೇನೊ 1
ಇದ್ದರಿರಲಿ ಕೂಸಿನ ಆಡುವಾಟಕೊಪ್ಪಿದರೆಎದ್ದು
ಹೋದರೆ ಹೋಗಲಿ ಆವಪಳ್ಳಿಂದಕದ್ದು
ತಿಂದನೆಂದಾವಾಗ ಕೂಗುವ ಕಾರಣವೇನೊಮುದ್ದೆ
ಬೆಣ್ಣೆ ಕೈಯಲಿತ್ತರೊಲ್ಲದೆ ಚೆಲ್ಲುವೆ ಕಂದ 2
ಏಸುಪುಣ್ಯರಾಶಿ ಕೂಡಿತೆಂದು ನಿನ್ನಾಟವ
ನೋಡಿಬೀಸಿ ಬಿಗಿದಪ್ಪುವಂಥ ಭಾಗ್ಯವನುಂಡೆಕೂಸೆ
ನಿನ್ನ ಕಂಡಸೂಯೆಬಡುವರಳಿಯಲಮ್ಮದಾಸರಿಗೆ
ಲೇಸಾಗಲಿ ಪ್ರಸನ್ವೆಂಕಟ ಕೃಷ್ಣ 3
*******
No comments:
Post a Comment