Showing posts with label ಇಭರಾಮಪುರ ಅಪ್ಪ ಸೌಭಾಗ್ಯ prasannashreenivasa appavara stutih. Show all posts
Showing posts with label ಇಭರಾಮಪುರ ಅಪ್ಪ ಸೌಭಾಗ್ಯ prasannashreenivasa appavara stutih. Show all posts

Friday, 27 December 2019

ಇಭರಾಮಪುರ ಅಪ್ಪ ಸೌಭಾಗ್ಯ prasannashreenivasa appavara stutih

ಪ್ರಸನ್ನ ಶ್ರೀನಿವಾಸದಾಸರು

ಶ್ರೀ ಇಭರಾಮಪುರ ಕೃಷ್ಣಾಚಾರ್ಯರ ಸ್ತೋತ್ರ
(ಅಪ್ಪಾವರು)

ಇಭರಾಮಪುರ ಅಪ್ಪ ಸೌಭಾಗ್ಯದಾಯಕರೇ |
ಶುಭನಾಮ ಶ್ರೀ ಕೃಷ್ಣಾಚಾರ್ಯರೇ ನಮಸ್ತೇ ||
ಇಭರಾಜ ವರದನಿಗು ದ್ರುಪದಾತ್ಮಜಾಪತಿಗು |
ಶುಭಚರಿತ ರಾಘವೇಂದ್ರಾರ್ಯರಿಗು ಪ್ರಿಯ ಪ

ಶ್ರೀರಾಮನರಹರಿ ಶ್ರೀಕರನಾರಾಯಣ |
ವರಾಹ ಹಯಶೀರ್ಷ ಶ್ರೀಕೃಷ್ಣನ ಪೂರ್ಣಾ ||
ನುಗ್ರಹಕೆ ಪೂರ್ಣಪಾತ್ರರೇ ನಿಮ್ಮ ಚರಣ |
ಅರವಿಂದದಲಿ ನಾನು ಶರಣು ಶರಣಾದೆ 1

ಪಂಚಮುಖ ಹನುಮಂತ ನರಸಿಂಹ ಗರುಡ
ವರಾಹ ಹಯವದನ ||
ಈ ಅಂಜನಾಸುತನನ್ನು ತತ್ ಅಂತಸ್ಥ |
ಪಂಚರೂಪ ಶ್ರೀಶನ್ನ ಪೂಜಿಪಮಹಂತ 2

ಅಪ್ಪಾವರೆಂದು ಪ್ರೇಮದಿ ಕರೆಸಿಕೊಂಡು
ಅಪ್ಪಮಕ್ಕಳಂತೆ ಕಾಯ್ದಿರಿ ಜನರ ||
ಅಪ್ಪಾ ಎಂದೀಗಲೂ ಸ್ಮರಿಸಿದರೂ ನಿಮ್ಮ ಸಹ
ಶ್ರೀಪ ತಿಮ್ಮಪ್ಪ ಬಂದೆಮ್ಮನು ಕಾಯ್ವ 3

ಮೇಲಿಂದ ಬಿದ್ದವನ್ನ ದೂರ ಇದ್ದರೂ ಕಾಯ್ದು
ತಾಳಿಗೋರೂಪ ಪಾದಜ ಧಾನ್ಯ ಉಂಡು ||
ಜಲದಿಂದ ವಿಪ್ರತಮ ಭಕ್ತವರನನ್ನ ಕಾಯ್ದು |
ಜಲಜನಾಭನ ಗಾಯಕನೆಂದು ಆಶಿಸಿದಿರಿ 4

ಬೊಮ್ಮನ ಪಿತ `ಶ್ರೀ ಪ್ರಸನ್ನ ಶ್ರೀನಿವಾಸನಲಿ'
ಪ್ರೇಮ ಅಚ್ಛಿನ್ನ ಭಕ್ತಿ ನಿಮಗೆ ದ್ವಿಜವರರೆ ||
ನಿಮ್ಮವನು ಭುವಿಯಲ್ಲಿ ತೋರಿಹ ಎನ್ನನ್ನು
ಪ್ರೇಮಾನುಗ್ರಹದಯದಿ ಪಾಲಿಪುದು ಶರಣು 5 ಪ
***

ಶ್ರೀ ಇಭರಾಮಪುರ ಅಪ್ಪಾವರ ಸ್ತೋತ್ರ 
ರಚನೆ : ಶ್ರೀ ಪ್ರಸನ್ನಶ್ರೀನಿವಾಸ ದಾಸರು

ಇಭರಾಮಪುರ ಅಪ್ಪ ಸೌಭಾಗ್ಯದಾಯಕರೇ |
ಶುಭನಾಮ ಶ್ರೀ ಕೃಷ್ಣಾಚಾರ್ಯರೇ ನಮಸ್ತೇ ||
ಇಭರಾಜ ವರದನಿಗು ದ್ರುಪದಾತ್ಮಜಾಪತಿಗು |
ಶುಭಚರಿತ ರಾಘವೇಂದ್ರಾರ್ಯರಿಗು ಪ್ರಿಯ ಪ

ಶ್ರೀರಾಮನರಹರಿ ಶ್ರೀಕರನಾರಾಯಣ |
ವರಾಹ ಹಯಶೀರ್ಷ ಶ್ರೀಕೃಷ್ಣನ ಪೂರ್ಣಾ ||
ನುಗ್ರಹಕೆ ಪೂರ್ಣಪಾತ್ರರೇ ನಿಮ್ಮ ಚರಣ |
ಅರವಿಂದದಲಿ ನಾನು ಶರಣು ಶರಣಾದೆ || 1 ||
ಪಂಚಮುಖ ಹನುಮಂತ ನರಸಿಂಹ ಗರುಡ
ವಾಂಛಿತಪ್ರದ ವರಾಹ ಹಯವದನ ||
ಈ ಅಂಜನಾಸುತನನ್ನು ತತ್ ಅಂತಸ್ಥ |
ಪಂಚರೂಪ ಶ್ರೀಶನ್ನ ಪೂಜಿಪಮಹಂತ || 2 ||

ಅಪ್ಪಾವರೆಂದು ಪ್ರೇಮದಿ ಕರೆಸಿಕೊಂಡು
ಅಪ್ಪಮಕ್ಕಳಂತೆ ಕಾಯ್ದಿರಿ ಜನರ ||
ಅಪ್ಪಾ ಎಂದೀಗಲೂ ಸ್ಮರಿಸಿದರೂ ನಿಮ್ಮ ಸಹ
ಶ್ರೀಪ ತಿಮ್ಮಪ್ಪ ಬಂದೆಮ್ಮನು ಕಾಯ್ವ || 3 ||

ಮೇಲಿಂದ ಬಿದ್ದವನ್ನ ದೂರ ಇದ್ದರೂ ಕಾಯ್ದು
ತಾಳಿಗೋರೂಪ ಪಾದಜ ಧಾನ್ಯ ಉಂಡು ||
ಜಲದಿಂದ ವಿಪ್ರತಮ ಭಕ್ತವರನನ್ನ ಕಾಯ್ದು |
ಜಲಜನಾಭನ ಗಾಯಕನೆಂದು ಆಶಿಸಿದಿರಿ || 4 ||

ಬೊಮ್ಮನ ಪಿತ ಶ್ರೀ ಪ್ರಸನ್ನ ಶ್ರೀನಿವಾಸನಲಿ
ಪ್ರೇಮ ಅಚ್ಛಿನ್ನ ಭಕ್ತಿ ನಿಮಗೆ ದ್ವಿಜವರರೆ ||
ನಿಮ್ಮವನು ಭುವಿಯಲ್ಲಿ ತೋರಿಹ ಎನ್ನನ್ನು
ಪ್ರೇಮಾನುಗ್ರಹದಯದಿ ಪಾಲಿಪುದು ಶರಣು || 5 ||
*********