..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಗಾಯತ್ರಿ ಪ್ರಣವ ಮಂತ್ರ ರಹಸ್ಯ
ಪ್ರಣವಾಷ್ಟ ದ್ವಾದಶಾಕ್ಷರ ಮನುಗಾಯತ್ರೀ |
ಘನ ಪುರುಷಸೂಕ್ತ ಸಾಹಸ್ರನಾಮಾ ನಿಗಮ ವೇದ್ಯ ||
ವರ್ಣ ವ್ಯಂಜನ ಸ್ವರಾಕ್ಷರ ಪ್ರತಿ ಪಾದ್ಯಾನಂತ ಕ್ರಿಯ |
ಗುಣ ರೂಪ ಶ್ರೀಶ ನಮೋ ಸರ್ವೇಶ ಗುರುಗ |
ಅನಂತ ಕ್ರಿಯ ಗುಣರೂಪ ಅನಘ ನಮೋ ವಾಯುಸ್ತ |
ಗುಣರೂಪಾ ಕ್ರಿಯಾ `ನಮೋ' ಅನಘವಾಯುಸ್ತ ||
ಅನಿಷ್ಟಹರ ಇಷ್ಟಪ್ರದ ವಿಷ್ಣುಸಾಸಿರನಾಮಾ ||
ಅನುಷ್ಟಪ್ ಛಂದಸ್ ಶ್ರೀ ಕೃಷ್ಣದೇವತೆಯು
ಅನಘ ಜ್ಞಾನಾದಿ ನಿರ್ದೋಷ ಗುಣನಿಧಿ
ಗುಣಪೂರ್ಣ ಅನಘ ಅಕಾರವಾಚ್ಯ ಅಂಭ್ರಣೀಶ
ವಿಷ್ಣು ಅವತಾರ ವೇದ ವ್ಯಾಸನೇ ಋಷಿಯು ||
ಪ್ರಣವೀಷ್ಟ ದ್ವಾದಶಾಕ್ಷರ ಮನುಗಾಯತ್ರೀ |
ಘನ ಪುರುಷ ಸೂಕ್ತ ಸಾಸಿರನಾಮವೇದ |
ವರ್ಣ ಸ್ವರವ್ಯಂಜನಾಕ್ಷರ ಸಾದು ಶರಧಿ
ಅನುಪಮ ಸರ್ವೋತ್ತಮ ಪ್ರತಿಪಾದ್ಯ ಶರಣು ||
***