.. by ಗುರುಪ್ರಾಣೇಶ ವಿಠಲ
ಸುಖದ ಸುಂದರ ವಿಠಲರಾಯಾ | ಈ |ಭಕುತಗೆ ವಿಜ್ಞಾನ ಕೊಡು ಜೀಯಾ ಪ
ಸುಖತೀರ್ಥ ಶಾಸ್ತ್ರ ಸಮ್ಮತವಾಗಿ | ಈ |ಸುಕವನಕ್ಕೆ ವಾಕ್ಯವದಾಗಲಿ ||ಸಕಲ ಜನರು ಕೇಳಿ ಪಾಡಲಿ | ಇದು |ಮುಕುತಿಗೆ ಸತ್ಪಥವಾಗಲಿ 1
ಆಯುರಾರೋಗ್ಯವು ಪೆಚ್ಚಲಿ | ಕೇಳಿ |ಮಾಯಾವಾದಿಗಳು ಬಾಯ್ಮುಚ್ಚಲಿ ||ಶ್ರೇಯಸ್ಸು ಬಂದು ಕೈಗೂಡಲಿ || ಶ್ರೀ ||ವಾಯುದೇವನು ಪ್ರೀತನಾಗಲಿ 2
ಗುರು ಪ್ರಾಣೇಶ ವಿಠ್ಠಲ ನೀನೂ | ತ್ಪರ |ಕರ ಪಿಡಿ ಶರಣರ ಸುರಧೇನು ||ಮರತವನಲ್ಲವೊ ನಿನ್ನನು | ಈ |ಬಿರುದು ನಿನ್ನದು ಕರ ಮುಗಿವೆನೊ 3
****