Showing posts with label ವ್ಯಾಸ ಬದರಿನಿವಾಸ ಎನ್ನಯ ಕ್ಲೇಶ vijaya vittala vedavyasa stutih. Show all posts
Showing posts with label ವ್ಯಾಸ ಬದರಿನಿವಾಸ ಎನ್ನಯ ಕ್ಲೇಶ vijaya vittala vedavyasa stutih. Show all posts

Thursday 26 December 2019

ವ್ಯಾಸ ಬದರಿನಿವಾಸ ಎನ್ನಯ ಕ್ಲೇಶ ankita vijaya vittala vedavyasa stutih

ವ್ಯಾಸ ಬದರಿನಿವಾಸ ಎನ್ನಯ ಕ್ಲೇಶ ನಾಶನಗೈಸು ಮೌನೀಷ |

ಸಾಸಿರ ಮಹಿಮನ ದೋಷರಹಿತ ಸುರ 
ಭೂಸುರ ಪರಿಪಾಲ ಶಾಶ್ವತ ವೇದ ||

ಸತ್ಯವತಿ ವರಸೂನು ಭವತಿದುರ ಭಾನು |
ಭೃತ್ಯವರ್ಗದ ಸುರಧೇನು ||

ಸತ್ಯಮೂರುತಿಯು ನೀನು ಸ್ತುತಿಪೆ ನಾನು | 
ನಿತ್ಯ ನಿನ್ನಂಘ್ರಿಯರೇಣು ||

ಉತ್ತಮಾಂಗದಲಿ ಹೊತ್ತು ಹೊತ್ತಿಗೆ 
ಸೂಸುತ್ತಿರತಿಗದು ಅತ್ಯಂತ ಸುಖಕರ ||

ಸುತ್ತುವ ಸುಳಿಯಿಂದೆತ್ತಿ ಕಡೆಗೆಯಿಡು | 
ಎತ್ತ ನೋಡಲು ವ್ಯಾಪುತ ಸದಾಗಮ || ೧ ||


ಲೋಕ ವಿಲಕ್ಷಣ ಋಷಿ ಗುಣವಾರಿ | 
ರಾಸಿ ವೈಕುಂಠ ನಗರ ನಿವಾಸಿ ||

ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ | 
ಬೇಕೆಂದು ಭಜಿಪೆ ನಿಲಿಸಿ ||

ಶೋಕ ಮಾಡುವುದು ಅನೇಕ ಪರಿಯಿಂದ | 
ಆ ಕುರುವಂಶದ ನಿಕರ ತರಿಸಿದೆ ||

ಭೂಕಾಂತರು ನೋಡೆ ಸಾಕಾರ ದೇವ | 
ಕೃಪಾಕರ ಮುನಿ ದಿವಾಕರಭಾಸ || ೨ ||


ಸ್ಮರಿಸಿದವರ ಮನೋಭಿಷ್ಟ | 
ವಾಶಿಷ್ಟ ಕೃಷ್ಣ | ನಿರುತ ಎನ್ನಯ ಅರಿಷ್ಟ ||

ಪರಿಹರಿಸುವುದು ಕಷ್ಟದೊಳತ್ಕ್ರುಷ್ಟ | 
ಮೆರೆವ ಉನ್ನತ ವಿಶಿಷ್ಟ ||

ಸುರನರ ಉರಗ ಕಿನ್ನರ ಗಂಧರ್ವರೂ | 
ಕರಕಮಲಗಳಿಂದ ವರಗೊಂಬ ||

ಸಿರಿ ಅರಸನೆ ನಮ್ಮ ವಿಜಯವಿಠಲ ಪರ | 
ಶರಸುತ ಬಲು ವಿಸ್ತಾರ ಜ್ಞಾನಾಂಭುದೆ || ೩ ||
***

vyAsa badarinivAsa ennayaklESa nASanagaisu maunISha
sAsira mahimana dOSharahita
sura BUsura paripAla SASvata vEda ||pa||

satyavati varasUnu Bavatidura BAnu
BRutyavargada suradhEnu
satyamUrutiyu nInu stutipe nAnu
nitya ninnanGriyarENu
uttamAngadali hottu hottige
sUsuttiratigadu atyanta suKakara
suttuva suLiyindetti kaDegeyiDu
etta nODalu vyAputa sadAgama || 1 ||

lOka vilakShaNa RuShi guNavAri |
rAsi vaikunTha nagara nivAsi
nAkArigaLa kuladvEShi citra sanyAsi
bEkendu Bajipe nilisi
SOka mADuvudu anEka pariyinda
A kuruvaMSada nikara tariside
BUkAntaru nODe sAkAra dEva
kRupAkara muni divAkaraBAsa || 2 ||

smarisidavara manOBiShTa
vASiShTa kRuShNa
niruta ennaya ariShTa
pariharisuvudu kaShTadoLatkruShTa
mereva unnata viSiShTa
suranara uraga kinnara gandharvarU
karakamalagaLinda varagoMba
siri arasane namma vijayaviThala para
Sarasuta balu vistAra j~jAnAMBude || 3 ||
***