ಹರಿಕಥೆಯ ಕೇಳುವ ಜನರು, ಈ
ಪರಿಯ ಪುರಾಣಕ್ಕೆ ಸರಿದು ಕುಳ್ಳಿರುವರು ||ಪ||
ನೆಲ್ಲು ಒಣಗಲಿಲ್ಲ , ಹಲ್ಲು ನೋವು ಘನ್ನ
ಕಲ್ಲು ಹೋಹದು(?) ಎನ್ನ ಕೈಯಲೆಂದು
ಫುಲ್ಲನಾಭನ ಕಥೆಯ ಪೂರೈಸಿ ಕೇಳದೆ
ಕಲ್ಲುಗೋವಿನ ಹಾಲು ಕರುವು ಬಯಸುವಂತೆ ||
ಪರರ ನಿಂದೆಗಳ ಬಿಡದೆ ತಾವಾಡುತ
ಮರೆತೆನೆ ಮನೆಯ ಬಾಗಿಲು ಹಾಕಲು
ಕರುವು ಕಟ್ಟಲಿಕೆ ಮರೆತು ಬಂದೆನೆಂಬ ಈ
ಪರಿಯ ಪುರಾಣಕ್ಕೆ ಸರಿದು ಕುಳ್ಳಿರುವರು ||
ಗಂಡನ ಲಂಡತನಗಳ ದೂರುತ
ಮಂಡೆಯ ಹುಡುಕುತ್ತ
ಪುಂಡರೀಕಾಕ್ಷನ ಕಥೆ ಪೂರೈಸಿ ಕೇಳದವರಿಗೆ
ದಂಡಿಪ ಪುರಂದರ ವಿಠಲನೆಂದರಿಯದೆ ||
***
ಪರಿಯ ಪುರಾಣಕ್ಕೆ ಸರಿದು ಕುಳ್ಳಿರುವರು ||ಪ||
ನೆಲ್ಲು ಒಣಗಲಿಲ್ಲ , ಹಲ್ಲು ನೋವು ಘನ್ನ
ಕಲ್ಲು ಹೋಹದು(?) ಎನ್ನ ಕೈಯಲೆಂದು
ಫುಲ್ಲನಾಭನ ಕಥೆಯ ಪೂರೈಸಿ ಕೇಳದೆ
ಕಲ್ಲುಗೋವಿನ ಹಾಲು ಕರುವು ಬಯಸುವಂತೆ ||
ಪರರ ನಿಂದೆಗಳ ಬಿಡದೆ ತಾವಾಡುತ
ಮರೆತೆನೆ ಮನೆಯ ಬಾಗಿಲು ಹಾಕಲು
ಕರುವು ಕಟ್ಟಲಿಕೆ ಮರೆತು ಬಂದೆನೆಂಬ ಈ
ಪರಿಯ ಪುರಾಣಕ್ಕೆ ಸರಿದು ಕುಳ್ಳಿರುವರು ||
ಗಂಡನ ಲಂಡತನಗಳ ದೂರುತ
ಮಂಡೆಯ ಹುಡುಕುತ್ತ
ಪುಂಡರೀಕಾಕ್ಷನ ಕಥೆ ಪೂರೈಸಿ ಕೇಳದವರಿಗೆ
ದಂಡಿಪ ಪುರಂದರ ವಿಠಲನೆಂದರಿಯದೆ ||
***
pallavi
harikathe kELuva parijanaru I pariya purANakke saridu kuLLiruvaru
caraNam 1
nellu oNagalilla hallu nOvu ghanna kallu hOgadu enna kaiyalendu
pulla nAbhana kathe pUrayisi kELade kalla gOvina hAla karuvu bayasuvante
caraNam 2
parara nindegaLa biDade tAvADuta maretene maneya bAgila hAkalu
karuvu kaTTalike maretu bandenemba I pariya purANakke neredu kuLLiruvaru
caraNam 3
gaNDana laNDa tanangaLa dUruta maNDeya huDukutta makkaLige
puNDarIkAkSana kathe pUrayisi kELade daNDipa purandara viTTalanendariyade
***