Showing posts with label ಸಿಕ್ಕಿದೆ ಬಾರೆಲೆ ಹೇ ಕಳ್ಳಾ ನಿನ್ನಚೊಕ್ಕ prasannavenkata. Show all posts
Showing posts with label ಸಿಕ್ಕಿದೆ ಬಾರೆಲೆ ಹೇ ಕಳ್ಳಾ ನಿನ್ನಚೊಕ್ಕ prasannavenkata. Show all posts

Monday, 18 November 2019

ಸಿಕ್ಕಿದೆ ಬಾರೆಲೆ ಹೇ ಕಳ್ಳಾ ನಿನ್ನಚೊಕ್ಕ ankita prasannavenkata

by ಪ್ರಸನ್ನವೆಂಕಟದಾಸರು
ಸಿಕ್ಕಿದೆ ಬಾರೆಲೆ ಹೇ ಕಳ್ಳಾ ನಿನ್ನಚೊಕ್ಕ ಸಹಸಾ ಜರಿವವಳಲ್ಲಭಕುತೀಲೆ ಕಟ್ಟುವೆ ಈರಡಿಯ ನಡೆಅಕ್ಕ ಗೋಪಮ್ಮನಿದ್ದೆಡೆಯ ಪ.

ಮುನ್ನಿನಪರಾಧಗಳ ತಾಳ್ದೆ ನಾನಿನ್ನ ದಿಟ್ಟತನ ಬಲವರಿದೆಚಿನ್ನನೆನಬಹುದೇನೊ ನಿನಗೆ ದಿಟ್ಟಗಣ್ಣವ್ಹರಿದೆಮ್ಮಯ ಮೊಲೆಗೆಉನ್ನತ ಗೋಡೆಗೆ ನಿಚ್ಚಣಿಕೆಯಿಕ್ಕದೆ ಪಾರಿದೆಘನ್ನ ಪಾಲು ಮೊಸರ ಗೋಪರೊಡನೆ ಸವಿದೆಉನ್ನತ ಮಹಿಮೆಯೆತ್ತ ಘನ್ನಜಾರತನಯೆತ್ತಬೆನ್ನ ಬಡಿಯುತ ನಗೆ ಬಿಡದಿಹ ಕಳ್ಳಾ 1

ಹರಿಮಧ್ಯದಬಲೆಯರೆಳೆದೆ ಪಂಚಶರನ ಭರಕೆ ಮತಿಗಳೆದೆಹರವಿ ತುಪ್ಪಾದರೆ ನೆಗೆದೆ ಈಗಕರೆದರೆ ಬರಲೊಲ್ಲೆ ನಗದೆಚೋರತನವೇಕೆ ಗಂಭೀರತನವೇಕೆಪರಿಪರಿಹಲವಂಗವೇಕೆ ವರಕರುಣೇಕೆಸಿರಿಕಾಂತನಹದೆತ್ತ ದುರುಳತನಗಳೆತ್ತಕ್ರೂರಮುಖಕಂಜಿದಡೆ ಬಿರುದು ಪೋಯಿತಲಾ 2

ತೊಂಡಮಕ್ಕಳ ಬಲವ ನೋಡಿದೆ ಬಲುಪುಂಡನಂತೆ ಕದನವನಾಡಿದೆಭಂಡತನದಲೊಬ್ಬನ ಬಡಿದೆ ದೊಡ್ಡಗಂಡಸಿನಂದದಿ ಮೇಲೋಡಿದೆಗಂಡನುಳ್ಳ ಬಾಲೆಯರ ಸದನಕೆ ಗಮಿಸಿ ಪ್ರಚಂಡತನದಿ ಮಿಂಡವೆಣ್ಣುಗಳ ಪಿಡಿದೆತಂಡ ತಂಡದೊಳು ಮುದ್ದುಕೊಡಲೀಸದಿರರು ಬೊಮ್ಮಾಂಡ ಪತಿಯಾದರಿದು ಸಲುವುದೆ ಕಳ್ಳಾ 3

ಉತ್ತಮ ಮರ ನೆರಳ ನೋಡಿದೆ ಮರಹತ್ತುತಲೆ ಚಂಡನೀಡಾಡಿದೆಸುತ್ತಲಿಹ ಗೋವರ ಬೇಡಿದೆ ಅವರೆತ್ತಿ ಕೊಡದಿರೆ ಹಗೆವಿಡಿದೆಮತ್ತಮಾವನ್ನೊತ್ತಿ ಮುದುಮುತ್ತನ ಕೈವಿಡಿದೆಕತ್ತಲೆ ಹಕ್ಕಿಯ ಮಾಡಿ ದಿತಿಜರನರಿದೆಎತ್ತಣ ವೈಕುಂಠ ನಿನಗೆತ್ತಣನಂತಾಸನವೊಭಕ್ತರ ಕಾಯ್ದೆ ಆವಪಟ್ಟಲಿಹೆ ಕಳ್ಳಾ 4

ಪೊಂದೊಡಿಗೆ ತೊಡದೆ ನಡುವಿರುಳೆ ಬರೆಕುಂದದೆ ವ್ರತಗೆಟ್ಟ ತರಳೆಛಂದವೇನೊ ನಿನಗೀವಾಜರೆಲೆ ಗೋವಿಂದೆರಡು ಕೈಕಟ್ಟಿ ತೋರಲೆಒಂದೊಂದುಸುರಲಿ ನಿನ್ನ ಗುಣಮಾಣಿಕದಖಣಿಅಂಧರಿಗರಿವುದೆ ಪ್ರಸನ್ವೆಂಕಟೇಶಮಂದರಘ ರಂಧ್ರಾವಳಿ ಪೊಂದಿಸಿ ನೋಡಲಾಗದುಇಂದಿರೆಯರಸನೆ ದಾಸವೃಂದವನು ಪೊರೆಯೊ 5
*******