..
kruti by ಬೇಲೂರು ವೈಕುಂಠ ದಾಸರು belur vaikunta dasaru
ವರದ ನಿನ್ನ ರೂಪ ಶ್ರೀ ನಿರುತ ನೋಡುವರೆ ಶ್ರೀ
ಸರಸಿಜಭವ ಸಕಲ ಪ
ಸುರರು ಮನುಗಳು ಮುನೀಶ್ವರರು ಶ್ರುತಿತತಿ
ಯರು ದಿಗ್ವರರು ತಾಕ್ಷ್ರ್ಯಕನ ಮತ[ದವರು] ಅ.ಪ
ಪರಭಕ್ತರಿಗೆ ದುಸ್ತರವಾದೊಡೆಯು ಕಾಡುವರಿಷಡ್ವರ್ಗವನೂ
ತೊರೆದು ಹೃದಯದಿ ತೀರ್ಥ ಚರಣಾರವಿಂದಗಳಿಂ
ದರಿವೆವೆಂದಡೆ ಅಗೋಚರನಾಗಿ ಸಿಲುಕದಿಹ ವಿಶ್ವರೂಪವ
ನಿರಿಸಿ ಪೂಜಾತಪವನುರೆ ಚರಿಸಿ ವ್ರತಗಳಿಂ1
ಧರೆಯನಳೆದಂಗವೇನಯ್ಯ ಅಂದು
ನರನಿಂಗೆ ತೋರಿದುದೆ ಜೀಯಾ
ಶರಣರುಗಳೊದೆಯುವ ಕಾಯಾ ನಿನ್ನ
ನಿರುಗೆಯನು ತೋರಿಸಲು ಒಡೆಯ ಕಾಣ 2
ಅರಿಯಬರುವುದಿಲ್ಲೀ ಚಿತ್ರಮಯ ಅಲ್ಪ
ನರನರಿತರಿಯದವನು ನೆಲೆಯಾ ನೋಡ
ಲರಿಯೆ ಭಯವಾಗುತಿದೆ ಮಾಯಾ ವೇಲಾ
ಪುರಿವಾಸ ವೈಕುಂಠ ಚೆನ್ನಕೇಶವರಾಯಾ 3
***