Showing posts with label ಲಾಲಿ ರಂಗನ ರಾಣಿ ಪರಮಕಲ್ಯಾಣಿ venkatakrishna. Show all posts
Showing posts with label ಲಾಲಿ ರಂಗನ ರಾಣಿ ಪರಮಕಲ್ಯಾಣಿ venkatakrishna. Show all posts

Tuesday, 1 June 2021

ಲಾಲಿ ರಂಗನ ರಾಣಿ ಪರಮಕಲ್ಯಾಣಿ ankita venkatakrishna

by yadugiriyamma  

ಲಾಲಿ ರಂಗನ ರಾಣಿ ಪರಮಕಲ್ಯಾಣಿ

ಲಾಲಿ ಕೀರವಾಣಿ ಪಂಕಜಪಾಣಿ ಲಾಲಿ ಪ.


ಕ್ಷೀರಸಾಗರದಲಿ ಜನಿಸಿ ತಾ ಬಂದು

ವಾರಿಜಾಕ್ಷನ ವಕ್ಷಸ್ಥಳದಿ ತಾ ನಿಂದು

ಘೋರ ಪಾತಕಿಗಳನು ಪೊರೆವೆನೆಂತೆಂದು

ಶ್ರೀರಂಗಕ್ಷೇತ್ರದಲಿ ಬಂದು ತಾ ನಿಂದು 1


ಶುದ್ಧ ಪಾಡ್ಯ ತುಲಾ ಕಾರ್ತೀಕದಲಿ

ಮುದ್ದು ಶ್ರೀರಂಗನ ರಾಣಿ ಹರುಷದಲಿ

ದಂತದ ಉಯ್ಯಾಲೆಮಂಟಪದಲ್ಲಿ

ಕಂತುಪಿತನರಸಿಯಾಡಿದಳೆ ಉಯ್ಯಾಲೆ 2


ಕಸ್ತೂರಿಯನಿಟ್ಟು ಮುತ್ತಿನ ಮೂಗುಬಟ್ಟು

ಹಾರಪದಕಗಳು ಪೀತಾಂಬ್ರವನೆ ಉಟ್ಟು

ಕುಂದಣದ ಒಡ್ಯಾಣವನ್ನು ಅಳವಟ್ಟು

ಇಂದಿರಾದೇವಿ ಆಡಿದಳೆ ಉಯ್ಯಾಲೆ 3


ರತ್ನದಾ ಕಿರೀಟವನ್ನು ತಾ ಧರಿಸಿ

ಕತ್ತರಿಯ ಬಾವುಲಿಯ ಕಮಲ ಸರಗಳಳವಡಿಸಿ

ಮುತ್ತು ಸುತ್ತಿದ ರತ್ನದಸುಲಿಯನು ಧರಿಸಿ ಅ

ಚ್ಚುತನರಾಣಿ ಆಡಿದಳೆ ಉಯ್ಯಾಲೆ 4


ದೋಸೆ ವಡೆ ನೈವೇದ್ಯ ಮೀಸಲನು ಸವಿದು

ದಾಸರೆತ್ತಿದ ಪಿಷ್ಟದಾರತಿಯಲಿ ನಲಿದು

ಲೇಸಾದ ಕರ್ಪೂರ ವೀಳ್ಯವನು ಸವಿದು

ವಾಸುದೇವನರಾಣಿ ಆಡಿದಳೆ ಉಯ್ಯಾಲೆ 5


ವರರಂಗವಂಶದವರು ವರದಿಂದ ಪಾಡೆ

ಕರುಣಾಕಟಾಕ್ಷದಿಂ ದೇವಿ ತಾ ನೋಡೆ

ಪ್ರಜೆಗಳೆಲ್ಲರು ಬಂದು ವರಗಳನು ಬೇಡೆ

ವಜ್ರದಭಯಹಸ್ತಗಳಿಂದ ವರಗಳನು ನೀಡೆ 6


ಕರ್ತ ಶ್ರೀ ಶ್ರೀನಿವಾಸ ರಂಗನಾರಾಣಿ

ಸಪ್ತದಿನದುಯ್ಯಾಲೆಯನು ತಾ ರಚಿಸಿ

ಭಕ್ತರಿಗೆ ತೀರ್ಥ ಪ್ರಸಾದಗಳನಿತ್ತು

ಅರ್ಥಿಯಿಂ ತೆರಳಿದಳು ತನ್ನರಮನೆಗೆ 7

****