Showing posts with label ವಾದಿರಾಜ ಅಸ್ಮದ್ಗುರು ವಾದಿರಾಜ jagannatha vittala VADIRAJA ASMADGURU VADIRAJA STUTIH. Show all posts
Showing posts with label ವಾದಿರಾಜ ಅಸ್ಮದ್ಗುರು ವಾದಿರಾಜ jagannatha vittala VADIRAJA ASMADGURU VADIRAJA STUTIH. Show all posts

Friday, 27 December 2019

ವಾದಿರಾಜ ಅಸ್ಮದ್ಗುರು ವಾದಿರಾಜ ankita jagannatha vittala VADIRAJA ASMADGURU VADIRAJA STUTIH

 ರಾಗ ಬೇಹಾಗ್  ಆದಿತಾಳ 
Audio by Mrs. Nandini Sripad

ಶ್ರೀ ಜಗನ್ನಾಥದಾಸರ ಕೃತಿ 


ವಾದಿರಾಜ ಅಸ್ಮದ್ಗುರು ವಾದಿರಾಜ ॥ ಪ ॥

ವಾದಿರಾಜ ತವ ಪಾದಕಮಲಕಭಿ - ।
ವಾದನ ಮಾಳ್ಪೆ ಸಮ್ಮೋದವಿತ್ತು ಕಾಯೋ ॥ 1 ॥

ಸಾರಿದರಿಗೆ ಕಲ್ಪಭೂರುಹದಂತೆ ಮ - ।
ನೋರಥ ಸಲಿಸುವ ಸೂರಿವರಿಯ ಗುರು ॥ 2 ॥

ಭೇದ ಪಂಚಕ ನೆರೆ ಸಾಧಿಸಿ ಕುಮತ ಕು - ।
ವಾದಿ ಗರ್ವಾದ್ರಿ ವಿಭೇದಭಿದುರ ಗುರು ॥ 3 ॥

ದೇಶಿಕವರ್ಯ ವಾಗೀಶಕುವರ ಎನ್ನ ।
ಕ್ಲೇಶಗೊಳಿಪಾವಿದ್ಯ ನಾಶನಗೈಸು ವೇಗ ॥ 4 ॥

ನಿಗಮವಿನುತ ಸಿರಿ  ಜಗನ್ನಾಥವಿಠಲನ ।
ಸುಗುಣಗಳನುದಿನ ಪೊಗಳಿ ಹಿಗ್ಗುವ ಗುರು ॥ 5 ॥
***

Vadiraja asmadguru vadiraja ||pa||


Vadiraja tava padakamalakabi
Vadana malpe samodavittu kayo ||1||

Saridarige kalpa buruha dante ma
Noratha salisuva surigalarase 2||2||

Beda pancakavanu sadhisi kumataku
Vadigarvadri vibedana gaide ||3||

Desikavarya vagisa kuvarane
Klesa harisu aganasa gaidu ||4||

Siri jagannathavithalana
Sugunagalanudina pogali higguvo ||5||
***


ವಾದಿರಾಜ ಅಸ್ಮದ್ಗುರು ವಾದಿರಾಜ ||pa||

ವಾದಿರಾಜ ತವ ಪಾದಕಮಲಕಭಿ
ವಾದನ ಮಾಳ್ಪೆ ಸಮೋದವಿತ್ತು ಕಾಯೊ ||1||

ಸಾರಿದರಿಗೆ ಕಲ್ಪ ಭೂರುಹ ದಂತೆ ಮ
ನೋರಥ ಸಲಿಸುವ ಸೂರಿಗಳರಸೇ 2||2||

ಭೇದ ಪಂಚಕವನು ಸಾಧಿಸಿ ಕುಮತಕು
ವಾದಿಗರ್ವಾದ್ರಿ ವಿಭೇದನ ಗೈದೆ ||3||

ದೇಶಿಕವರ್ಯ ವಾಗೀಶ ಕುವರನೆ
ಕ್ಲೇಶ ಹರಿಸು ಅಘನಾಶ ಗೈದು ||4||

ಸಿರಿ ಜಗನ್ನಾಥವಿಠಲನ
ಸುಗುಣಗಳನುದಿನ ಪೊಗಳಿ ಹಿಗ್ಗುವೊ ||5||
*****