ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಳಿ ಬಂದೆ ಪ
ಕೇಳಿ ಬಂದೆ ನಿನ್ನ ಮೊರೆಹೊಕ್ಕವರ ಕೈಯ್ಯಾ | ಇಳೆಯೊಳಗ ಬಿಡನೆಂಬ ಬಿರುದವ ನಾ1
ಸುಗ್ರೀವ ತಾ ಪುಗೆ ಒಡಲವನು ವಾಲಿಯನು | ನಿಗ್ರಹಿಸಿರಾಜ್ಯ ಪದವಿತ್ತನೆಂದು 2
ಶರಧಿ ಧಡಿಯಲಿ ವಿಭೀಷಣನು ಶರಣವನು | ಬರಲು ಧೃಡ ಸಂಪತ್ತು ನಿತ್ತನೆಂದು 3
ಖಂಡಿಸಿ ಕೌರವರ ಬಳಗವನು ಸೈನ್ಯವನು | ಪಾಂಡವರನು ಸ್ಥಾಪನೆ ಗೈದಾನೆಂದು 4
ಏನ್ನನು ಪೇಕ್ಷಿಸದಿರು ನೀನು ಕಾರಣನು | ಸನ್ನುತ ಮಹಿಪತಿ ಸುತ ಜೀವನಾ 5
***