ಕಾಖಂಡಕಿ ಶ್ರೀ ಕೃಷ್ಣದಾಸರು
ಏನೋ ಪ್ರಾಣಿ ಪ
ಏನೋ ಪ್ರಾಣಿ ಮುಂದಗಣೀ | ಹೀನಗುಣಗಳ ಶ್ರೇಣಿ | ತಾ ನಳಿಯಂದದಿ ಮಾಣಿ ನೀ ನುಡಿನಮ್ರತವಾಣಿ | ಸ್ವಾನಂದ ಜನ್ಮಕ ಬಂದೆನಿಸಿ ಕೊಂಬುದು | ವಿಹಿದುತ್ತಮ ಜ್ಞಾನಿ 1
ಕೇಳು ಕೇಳಿಧಾಂಗ ಬಲು ಹೇಳಿದಾಂಗ ಮೇಳು | ತಿಳಿಗುರು ಭಕ್ತಿಯ ಮೇಲು ಬಲು ವಿವೇಕವ ತಾಳು | ಛಲದ ಮದಮತ್ಸರ ಶೀಳು ತಳಿಮನ ದುರ್ವತ್ತಿಗಳು | ಇಳಯೊಳು ಶ್ರೀ ಗುರುಪಾದಕ ನಂಬಿ | ವಿಡಿಯೋ ಪಂಥವಾ ಸೇರು 2
ಜರಿ ಹಂ ಮಮತೆಯ ದೂರಾ ಸರಿ ನಗಿ ಆರಿ ಮಿತ್ರರಾ | ಮರೆಯೋ ನಿಂದೆಯ ಪರರಾ ತೋರದೇ ವಾಗ್ವಿಸ್ತಾರಾ | ಪರಿ ನುಡಿಯಲಿ | ಮಹಿಪತಿಸುತ ಪ್ರಭು ಉದಾರಾ 3
***