ಎರಡೂ ಕೈ ಮುಗಿದೂ ಬೇಡುವನ್ಯಾರೇ ಪೇಳಮ್ಮಯ್ಯ ಪ
ಸುರನರರ ಖಳರ ಪರಿಪರಿ ಕರ್ಮವ ಹರಿಗೊಪ್ಪಿಸುವಮರುತ ಕಾಣಮ್ಮ ಅ.ಪ.
ಕರವ ಬಲಕೆತ್ತೆ ನಿಂತಹನ್ಯಾರೇ ಪೇಳಮ್ಮಯ್ಯಾಭರದಿಂದ ಚರಣಗಳೂರಿದನ್ಯಾರೇ ಪೇಳಮ್ಮಯ್ಯಾದುರುಳ ಜನರ ಮೆಟ್ಟಿ ಶರಣರಿಗಭಯವಕರೆದು ಕೊಡುವ ಬಹು ಕರುಣಿ ಕಾಣಮ್ಮ 1
ಬಿಂಕಾದಿ ಮುಖವಾ ತಿರುಹಿದನ್ಯಾರೇ ಪೇಳಕ್ಕಯ್ಯಟೊಂಕಾದಿ ಎಡಗೈಯಿಟ್ಟಿಹನ್ಯಾರೇ ಪೇಳಕ್ಕಯ್ಯಕಿಂಕರರಡಿ ಬರೆ ಅಂಕದೊಳೆತ್ತುವಡೊಂಕನಾದ ನಿಷ್ಕಳಂಕ ಕಾಣಮ್ಮ 2
ಚೆಲುವ ಸರ್ವಾಂಗಲಕ್ಷಣನ್ಯಾರೇ ಪೇಳಮ್ಮಯ್ಯಹಲವೂ ಫಲಗಳನೂ ನೀಡುವನ್ಯಾರೇ ಪೇಳಮ್ಮಯ್ಯಸುಲಭಗೋಪತಿವಿಠಲನ ಪ್ರಿಯಕದರುಂಡಲಗಿ ಪುರಿ ಧೊರೆ ಇವನಮ್ಮ 3
****