ಕಾಖಂಡಕಿ ಶ್ರೀ ಕೃಷ್ಣದಾಸರು
ತಮ್ಮ ಮಾತಿನರಹು ತಮಗಿಲ್ಲಾ | ಸುಮ್ಮನಾಡುತಲ್ಯೆದ ಜಗವೆಲ್ಲಾ ಪ
ನಾನೇ ಆ ಬ್ರಹ್ಮನೆಂದುಸುರುವನು | ತಾನುದಾರು ಮತ್ತಾರಿಗ್ಹೇಳುವನು 1
ನಿಸ್ತರಗಾಂಬೋಧಿಯೆನಿಸಿದಾ | ವಸ್ತುವಿಗೆ ದೃಶ್ಯವಿವಾದಾ 2
ಬೆಲ್ಲ ಸವಿದ ಮೂಕನಂತಾಗಿ | ನಿಲ್ಲುವವನೇ ಜಗದೊಳು ಯೋಗಿ3
ದ್ವೈತಾದ್ವೈತ ಮೀರಿಹ ಖೂನಾ | ತಾತ ಮಹಿಪತಿ ಗುರುಜ್ಞಾನಾ 4
****