Showing posts with label ಪೂರ್ಣ ಸುಗುಣಾರ್ಣವನೇಅನಘಮಾಯಾ prasannashreenivasa. Show all posts
Showing posts with label ಪೂರ್ಣ ಸುಗುಣಾರ್ಣವನೇಅನಘಮಾಯಾ prasannashreenivasa. Show all posts

Friday, 27 December 2019

ಪೂರ್ಣ ಸುಗುಣಾರ್ಣವನೇಅನಘಮಾಯಾ ankita prasannashreenivasa

ಶ್ರೀ ಕೃಷ್ಣ ಪ್ರಾದುರ್ಭಾವ ಸ್ತುತಿ

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru


ಪೂರ್ಣ ಸುಗುಣಾರ್ಣವನೇ ಅನಘ ಮಾಯಾ ರಮಣ

ಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥ

ಜ್ಞಾನ ಸುಖ ಬಲ ಚೇಷ್ಟರೂಪ ದೇವಕೀ ತನಯ

ಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪ.


ಅನುಪಮಾದ್ಭುತ ಬಾಲಕನು ಅಂಬುಜೇಕ್ಷಣ

ರತ್ನ ಕಿರೀಟ ಪೊಳೆವ ಕೌಸ್ತುಭ

ಮಣಿ ಉರದಿ ಶ್ರೀವತ್ಸ ಚತುರ್ಭುಜನೇ | ಪಾಂಚ

ಜನ್ಯ ಕೌಮೋದಕೀ ಸುದರ್ಶನ ಸರೋಜ 1

ಉದ್ದಾಮ ಕಾಂಚನಾಂಗದ ಕಂಕಣಾದಿಗಳ್

ಪೀತಾಂಬರ ಪಾದನೂಪುರ | ಪೂರ್ಣೇಂದು

ಮುದ್ದು ಮುಖ ಮುಗುಳ ನಗೆ ಸುಳಿಗೊರಳು ಶುಭನೋಟ |

ಮೋದ | ಚಿನ್ಮಯ ಹೀಗೆ ಪ್ರಾದುರ್ಭವಿಸಿದೆಯೋ 2

ಈ ರೂಪ ವಸುದೇವ ನೋಡಿ ಸ್ತುತಿಸಿದ ನಿನ್ನ

ಅರಿಯೆ ನಾ ವರ್ಣಿಸಲು ನಿನ್ನ ಗುಣರೂಪ

ಶರಣು ಆತ್ಮನೇ ಪರನೇ ಉದ್ದಾಮ ಹರಿಕೃಷ್ಣ

ಶರಣು ಸರ್ವಾಶ್ರಯನೇ ಶ್ರೀಶ ಮಾಂ ಪಾಹಿ 3

ಜಯತು ದೇವಕೀ ತನಯ ಸತ್ಯಾ ರುಕ್ಮಿಣೀ ಕಾಂತ

ಜಯತು ಪೂರ್ಣಪ್ರಜ್ಞ ಹೃತ್ ಪದ್ಮ ಸಂಸ್ಥ

ಜಯತು ಜಗತ್ ಜನ್ಮಾದಿಕರ್ತ ಜಗನ್ನಾಥ

ಜಯತು ಜಗತ್ ಜನ್ಮಾದಿಕರ್ತ ಜಗನ್ನಾಥ

ಜಯತು ವಿಧಿತಾತ ‘ಪ್ರಸನ್ನ ಶ್ರೀನಿವಾಸ’ 

***


ಪೂರ್ಣ ಸುಗುಣಾರ್ಣವನೇಅನಘಮಾಯಾರಮಣಆ ನಮಿಪೆ ಶ್ರೀ ಕೃಷ್ಣ ರುಕ್ಮಿಣೀನಾಥಜ್ಞಾನ ಸುಖ ಬಲ ಚೇಷ್ಟರೂಪ ದೇವಕೀತನಯಸೌಂದರ್ಯಸಾರ ಜಗತ್ ಜನ್ಮಾದಿಕರ್ತ ಪ.

ಅನುಪಮಾದ್ಭುತ ಬಾಲಕನು ಅಂಬುಜೇಕ್ಷಣರತ್ನ ಕಿರೀಟ ಪೊಳೆವಕೌಸ್ತುಭಮಣಿಉರದಿ ಶ್ರೀವತ್ಸ ಚತುರ್ಭುಜನೇ | ಪಾಂಚಜನ್ಯ ಕೌಮೋದಕೀ ಸುದರ್ಶನ ಸರೋಜ 1

ಉದ್ದಾಮ ಕಾಂಚನಾಂಗದ ಕಂಕಣಾದಿಗಳ್ಪೀತಾಂಬರ ಪಾದನೂಪುರ | ಪೂರ್ಣೇಂದುಮುದ್ದು ಮುಖ ಮುಗುಳ ನಗೆ ಸುಳಿಗೊರಳು ಶುಭನೋಟ |ಮೋದ| ಚಿನ್ಮಯ ಹೀಗೆ ಪ್ರಾದುರ್ಭವಿಸಿದೆಯೋ2

ಈರೂಪವಸುದೇವ ನೋಡಿ ಸ್ತುತಿಸಿದ ನಿನ್ನಅರಿಯೆ ನಾ ವರ್ಣಿಸಲು ನಿನ್ನ ಗುಣರೂಪಶರಣು ಆತ್ಮನೇ ಪರನೇ ಉದ್ದಾಮ ಹರಿಕೃಷ್ಣಶರಣು ಸರ್ವಾಶ್ರಯನೇ ಶ್ರೀಶ ಮಾಂಪಾಹಿ3

ಜಯತು ದೇವಕೀತನಯಸತ್ಯಾ ರುಕ್ಮಿಣೀ ಕಾಂತಜಯತುಪೂರ್ಣಪ್ರಜÕಹೃತ್ ಪದ್ಮ ಸಂಸ್ಥಜಯತು ಜಗತ್ ಜನ್ಮಾದಿಕರ್ತ ಜಗನ್ನಾಥಜಯತು ಜಗತ್ ಜನ್ಮಾದಿಕರ್ತ ಜಗನ್ನಾಥಜಯತು ವಿಧಿತಾತ ಪ್ರಸನ್ನ ಶ್ರೀನಿವಾಸ ಪ
***********