ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣೆನ್ನಿ ಸಾಧುರಿಂಗೆ | ಹರಿ ಮೆಚ್ಚುಪರಮ ಭಾಗವತರಿಂಗೆ ಪ
ತೀರ್ಥ ಕ್ಷೇತ್ರಂಗಳಲ್ಲಿ ಮಿಂದು ಘನ | ಯಾತ್ರೆಯನು ಮಾಡಿ ಬರಲಿ | ಧಾತ್ರಿಯಲಿ ಕೆಲವು ದಿನಕೆ ಆ ಪುಣ್ಯ | ವರ್ಥಿ ಬಹುದಯ್ಯ ಜನಕ | ಅರ್ತು ಸದ್ಭಾವದಿಂದ್ಹೋಗಿ ಸಂತರ ಕಂಡ | ಮಾತ್ರದಲಿ ಸರ್ವ ಸುಖ ಇದಿರಿಡುವದೆಂದು 1
ಮೆರೆವ ಭಾಗವತದಲ್ಲಿ ಉದ್ಭವಗೆ | ಹರಿತಾನೆ ಬೋಧಿಸುತಲಿ | ನೆರೆಯೋಗ ಯಾಗ ವೃತವು ಯನ್ನಹಿಡಿ | ಲರಿಯದಿದು ಸಾಂಖ್ಯ ತಪವು | ನಿರುತೆನ್ನ ಸತ್ಸಂಗ ತೋರಿ ಕೊಡುವಂತನ್ಯ | ಧರಿಯೊಳಗ ಸಾಧನಗಳಿಲ್ಲ ಕೇಳೆಂದಾ 2
ಚಲಮೂರ್ತಿ ಸಂತರುಗಳು ನೋಡಲಾ | ಚಲಮೂರ್ತಿ ಪ್ರತಿಮೆಯಗಳು | ನಲಿದವರ ಪೂಜೆಯಿಂದಾ ಪ್ರೀಯನಾಗಿ | ಸಲಹುವನು ಶ್ರೀ ಮುಕುಂದಾ | ತಿಳಿಯ ದೆಂದಿಗೆ ಅಭಾವಿಕ ವರ ಮಹಿಮೆಗಳು | ವಲಿದು ಗುರುಮಹಿಪತಿ ಸುತಗೆಚ್ಚರಿಸಿದಾ 3
***