Showing posts with label ಶ್ರೀರಾಮಚಂದ್ರ ಚರಣಾರಾಧಕ ಗುರು ರಾಘವೇಂದ್ರರೆ ನಮಿಸುವೆನು pandarinatha vittala. Show all posts
Showing posts with label ಶ್ರೀರಾಮಚಂದ್ರ ಚರಣಾರಾಧಕ ಗುರು ರಾಘವೇಂದ್ರರೆ ನಮಿಸುವೆನು pandarinatha vittala. Show all posts

Monday 6 September 2021

ಶ್ರೀರಾಮಚಂದ್ರ ಚರಣಾರಾಧಕ ಗುರು ರಾಘವೇಂದ್ರರೆ ನಮಿಸುವೆನು ankita pandarinatha vittala

ankita ಪಂಡರೀನಾಥವಿಠಲ

ರಾಗ: [ಅಭೋಗಿ] ತಾಳ: [ಆದಿ]


ಶ್ರೀ ರಾಮಚಂದ್ರ ಚರಣಾರಾಧಕ 

ಗುರು ರಾಘವೇಂದ್ರರೆ ನಮಿಸುವೆನು


ಮರುತಮತವನುದ್ಧರಿಸಿ ಮೆರೆದ

ಪ್ರಹ್ಲಾದ ವ್ಯಾಸರೆ ನಮಿಸುವೆನು ಅ.ಪ


ಪರಿಪರಿ ಸುಜನರ ಕ್ಲೇಶವ ಕಳೆಯುವ

ಮಹಾಮಹಿಮರೆ ನಮಿಸುವೆನು

ನಿರುತ ಪೊಳೆವ ಬೃಂದಾವನಗತ ಸ-

ದ್ಗುರುವೆ ನಾ ಸದಾ ನಮಿಸುವೆನು 1

ಕಾಷಾಯಾಂಬರ ತುಳಸಿ ಮಾಲೆಯಲಿ

ಒಪ್ಪುವ ನಿಮಗೆ ನಮಿಸುವೆನು

ಶ್ರೀಶನ ಪಾದವ ಬಿಡದೆ ಭಜಿಪ ಸ-

ದ್ಗುರು ನಿಮಗನಂತ ನಮನಗಳು 2

ಗುರು ಸಿರಿ ಹರಿ ಕಾರುಣ್ಯ ತೋರ್ದ ಸ-

ದ್ಗುರು ಕಾರುಣ್ಯರೆ ನಮಿಸುವೆನು

ಭರದಿ ಕೃಪೆಯ ನೀವ್ ತೋರಿಸಿ ದಾಸನ

ಮಾಡಿದ ಮಹಿಮರೆ ನಮಿಸುವೆನು 3

ನಾರಸಿಂಹ ಜಡ ಕಂಬದೊಳುದಿಸಲು

ಕಾರಣಕರ್ತರೆ ನಮಿಸುವೆನು

ಪರಿಪರಿಯಲಿ ನೀ ವಂದಿಸಿಕೊಳುತಲಿ

ಮೆರೆವ ಸದ್ಗುರು ನಮಿಸುವೆನು 4

ಗುರು ಸಹೃದಯಕೆ ಬೇಡುವೆ ಅವಿರತ

ತುಂಬಿರಿ ಹೃದಯದಿ ಭಕ್ತಿಯನು

ಮರುತನ ದೊರೆ ಪಂಡರೀನಾಥವಿಠಲನ

ತೋರ್ವುದು ಶೀಘ್ರದಿ ಹೃದಯದೊಳು 5

***