Showing posts with label ಇದೇ ಸಮಯವು ನೋಡು ಸಖನೇ ರತಿ ಕ್ರೀಡೆಗೆ ಶುಭಕಾಲ tandevaradagopala vittala. Show all posts
Showing posts with label ಇದೇ ಸಮಯವು ನೋಡು ಸಖನೇ ರತಿ ಕ್ರೀಡೆಗೆ ಶುಭಕಾಲ tandevaradagopala vittala. Show all posts

Thursday 5 August 2021

ಇದೇ ಸಮಯವು ನೋಡು ಸಖನೇ ರತಿ ಕ್ರೀಡೆಗೆ ಶುಭಕಾಲ ankita tandevaradagopala vittala

 ..


kruti: tandevaradagopala vittala (ಪ್ರಹ್ಲಾದಗೌಡರು)

ಇದೇ ಸಮಯವು ನೋಡು ಸಖನೇ ರತಿ ಕ್ರೀಡೆಗೆ ಶುಭಕಾಲ ಪ


ರತಿಪತಿಪಿತ ನಿನ್ನತಿಶಯ ಹಿತವಾಗುವ ಸುಖಸವಿಯದ ಮ್ಯಾಲೆ ಸಖಿಯರ ಬಾಳೇ ಅ.ಪ.


ಮದನನಯ್ಯನೇ ಮುದದಿ ಬಂದು ಮದನ ಕದನವ ಮಾಡಿ ಎಮ್ಮೊಳುಮಧು ರಸಾಯನ ಸಾರ ಸುರಿಸೋ ಸರಸಿಜಾಕ್ಷಾ 1

ಜಾಣೆ ನೀಯೆನ್ನ ಪ್ರಾಣದಾಣೆಯೆ ಗೇಣು ವಳಗಡೆ ಜೀವದೊಳಗಿದ್ದುಪೂರ್ಣಸುಖವಿತ್ತು ಪಾರುಗಾಣಿಪೆ ಪ್ರಾಣಕಾಂತೆಯೆ 2

ಎಂತು ಪೇಳಲಿ ನಿನ್ನ ಮಹಿಮೆಯ ಪ್ರಾಂತಗಾಣದೆ ಶ್ರಾಂತರಾಗುವರೈ ಹನುಮಂತ ಮೊದಲಾದ್ಯನಂತ ಗುಣಿಗಳು ದಿಗ್ಭ್ರಾಂತರಾದರು ತಂದೆವರದಗೋಪಾಲಕಂತುಪಿತ 3

***