Thursday, 5 August 2021

ಇದೇ ಸಮಯವು ನೋಡು ಸಖನೇ ರತಿ ಕ್ರೀಡೆಗೆ ಶುಭಕಾಲ ankita tandevaradagopala vittala

 ..


kruti: tandevaradagopala vittala (ಪ್ರಹ್ಲಾದಗೌಡರು)

ಇದೇ ಸಮಯವು ನೋಡು ಸಖನೇ ರತಿ ಕ್ರೀಡೆಗೆ ಶುಭಕಾಲ ಪ


ರತಿಪತಿಪಿತ ನಿನ್ನತಿಶಯ ಹಿತವಾಗುವ ಸುಖಸವಿಯದ ಮ್ಯಾಲೆ ಸಖಿಯರ ಬಾಳೇ ಅ.ಪ.


ಮದನನಯ್ಯನೇ ಮುದದಿ ಬಂದು ಮದನ ಕದನವ ಮಾಡಿ ಎಮ್ಮೊಳುಮಧು ರಸಾಯನ ಸಾರ ಸುರಿಸೋ ಸರಸಿಜಾಕ್ಷಾ 1

ಜಾಣೆ ನೀಯೆನ್ನ ಪ್ರಾಣದಾಣೆಯೆ ಗೇಣು ವಳಗಡೆ ಜೀವದೊಳಗಿದ್ದುಪೂರ್ಣಸುಖವಿತ್ತು ಪಾರುಗಾಣಿಪೆ ಪ್ರಾಣಕಾಂತೆಯೆ 2

ಎಂತು ಪೇಳಲಿ ನಿನ್ನ ಮಹಿಮೆಯ ಪ್ರಾಂತಗಾಣದೆ ಶ್ರಾಂತರಾಗುವರೈ ಹನುಮಂತ ಮೊದಲಾದ್ಯನಂತ ಗುಣಿಗಳು ದಿಗ್ಭ್ರಾಂತರಾದರು ತಂದೆವರದಗೋಪಾಲಕಂತುಪಿತ 3

***

No comments:

Post a Comment