Showing posts with label ಕರಿಮುಖದ ಗಣಪತಿಯ ಚರಣಕ್ವಂದನೆ ಮಾಡಿ bheemesha krishna KARIMUKHADA GANAPATIYA CHARANKVANDANE MAADI. Show all posts
Showing posts with label ಕರಿಮುಖದ ಗಣಪತಿಯ ಚರಣಕ್ವಂದನೆ ಮಾಡಿ bheemesha krishna KARIMUKHADA GANAPATIYA CHARANKVANDANE MAADI. Show all posts

Thursday, 2 December 2021

ಕರಿಮುಖದ ಗಣಪತಿಯ ಚರಣಕ್ವಂದನೆ ಮಾಡಿ ankita bheemesha krishna KARIMUKHADA GANAPATIYA CHARANKVANDANE MAADI



ಕರಿಮುಖದ ಗಣಪತಿಯ ಚರಣಕ್ವಂದನೆ ಮಾಡಿ

ಶಾರದೆಗೆ ಶಿರಬಾಗಿ ಬೇಡಿಕೊಂಬುವೆ ನಾನು

ಒಲಿದೆನಗೆ ವರವ ಕೊಡುಯೆಂದು 1


ಅಜ ಭವ ನಾರಂದ ಸುಜನರ್ವಂದಿತ ವಾಯು

ಮುದದಿಂದ ಮುದ್ದು ಮಾಲಕ್ಷ್ಮಿ ನಾರಾಯಣರ

ಅಂಬುಜ ಪಾದಕ್ಕೆರಗಿ ನಮೋಯೆಂಬೆ 2


ಪದುಮನಾಭ ಹರಿಗೆ ನಿಜ ಭಕ್ತರಾದಂಥ

ಬುಧ ಬೃಹಸ್ಪತಿಗಳ ಕಥೆಯ ಪೇಳುವೆ ನಾನು

ಮುದದಿಂದ ಕೇಳಿ ಜನರೆಲ್ಲ3


ಇರುತಿದ್ದ ಬಡವ ಬ್ರಾಹ್ಮಣ ಒಂದು ಪಟ್ಟಣದಿ

ಮಡದಿ ಮಕ್ಕಳು ನಾಲ್ಕು ಮಂದಿ ಸುತರು

ಸೊಸೆಯರೊಡಗೂಡಿಕೊಂಡು ಸುಖದಿಂದ 4


ಒಬ್ಬೊಬ್ಬ ಸುತಗಿಬ್ಬಿಬ್ಬರು ಗಂಡಸು ಮಕ್ಕಳು

ವಿಧ್ಯುಕ್ತದಿಂದ ಜಾವಳ ಜುಟ್ಟು ಉಪನಯನ

ಶುದ್ಧಾತ್ಮರಾಗಿ ಇರುತಿಹರು 5


ಪ್ರಾತಃಕಾಲದೊಳೆದ್ದು ನಾಲ್ಕು ಮಂದಿ ಸುತರು

ಗೋಪಾಳ ಜೋಳ ನಾಲ್ಕು ಸೇರು ಕಾಳು

ತಂದ್ಹಾಕೋರು ಅರ್ಧಗ್ರಾಸವನು 6


ಮೂರು ಪಾವು ಹಿಟ್ಟು ಮುಂಜಾನೆಗೆ ಇಟ್ಟು

ಮುಂದುಳಿದ ಗ್ರಾಸ ಮುದ್ದೆ ಅಂಬಲಿ

ಕಾಸಿಕೊಂಡುಂಡು ಕಾಲ ಕಳೆವೋರು 7


ಒಂದಾನೊಂದಿನದಲ್ಲಿ ಬಂದರಿಬ್ಬರು ದ್ವಿಜರು

ಮಂದಿರದ ದ್ವಾರದಲಿ ನಿಂತು ಕೂಗುತಿರೆ

ಬಂದಳೊಬ್ಬಿ ್ಹರಿಯ ಸೊಸೆ ತಾನು 8


ದಾರು ಬಂದವರು ನಿಮ್ಮ ನಾಮವೇನೆಂದೆನುತ

ಬಾಗಿ ಶಿರಗಳನೆ ಚರಣಕ್ವಂದನೆ ಮಾಡಿ

ಭಾಳ ಭಕ್ತಿಂದ ಕರೆದಳು 9


ದಾರಾದರೇನಮ್ಮ ಬಾಯಾರಿ ಬಳಲುತಲಿ

ಮೂರು ನಿರಾಹಾರ ಮಾಡಿ ಬಂದೆವು ನಾವು

ಆಹಾರ ನೀಡಿ ಕಳಿಸೆಂದ್ರು 10


ಭಿಕ್ಷಕೆ ಹೋದವರು ಈ ಕ್ಷಣದಿ ಬರುವೋರು

ಅರೆಕ್ಷಣ ನೀವು ತಡೆದರೆ ಜೋಳದ

ಭಕ್ಷ್ಯವನೆ ಮಾಡಿ ಬಡಿಸುವೆನು 11


ಹೊತ್ತು ಭಾಳಾಯಿತು ಹಸ್ತವು ನಮ್ಮೊ ್ಹಟ್ಟೆ

ತುತ್ತನ್ನ ಹಾಕಿದರೆ ಈಗ ನಾವದನುಂಡು

ತೃಪ್ತರಾಗ್ಹರಸಿ ನಡೆದೇವು 12


ಮಡಿವುಟ್ಟು ಮಾಡಿದೆನು ಮುಂಜಿಮನೆಗಳಿಗಡಿಗೆ

ತಡೆಯದೆ ಸ್ನಾನಮಾಡಿ ಬನ್ನಿರೆಂದು

ನುಡಿದಳು ಬ್ಯಾಗ ಪತಿವ್ರತೆ 13


ನಾಲ್ಕು ಭಕ್ಕರಿಯೊಳಗೆ ಎಂಟರ್ಧವನು ಮಾಡಿ

ಎಂಟುಮಕ್ಕಳಿಗೆ ಬಡಿಸೋ ಗ್ರಾಸವನು

ಸಂತೋಷದಿಂದ ಬಡಿಸುವೆನು 14


ಸ್ನಾನ ಸಂಧ್ಯಾನವ ಮಾಡಿ ಬಂದೇವೆನಲು

ತಾನು ಎಡೆಮಾಡಿ ಎರಡೆರಡು ಭಕ್ಕರಿಯ

ನೀಡಿದಳು ಭಾಳ ಭಕ್ತಿಂದೆ 15


ಬೆಣ್ಣೆ ಬೆಲ್ಲ ತುಪ್ಪ ಕರಣೆ ಕರಣೆ ಕೆನೆಮೊಸರು

ನುಣ್ಣನೆ ತವ್ವೆ ಅರೆದಕೊಬ್ಬರಿ ಖಾರ

ಉಣ್ಣಿರೆಂದ್ಹಾಕುತಿರಲಾಗ 16


ಸಡಗರದಲದನುಂಡು ಕುಡಿದು ಮ್ಯಾಲ್ ಮಜ್ಜಿಗೆಯ

ಒಡೆದಡಿಕೆಯೆಲೆ ಕೊಟ್ಟು ಕೇಳುತ ನಿಮ್ಮ

ನಡೆವೊ ನಾಮೇನು ಹೇಳೆಂದ್ಲು 17


ಇಂದುಸುತ ಸುರರ ಗುರುವೆಂದು ಪೇಳುವರ್ ನಮಗೆ

ಬಂದೆವು ನಾವು ಬುಧ ಬೃಹಸ್ಪತಿಗಳು ಆ-

ನಂದವಾಯಿತು ನಮಗೆಂದ್ರು 18


ಅನ್ನ ಬೇಕಾದರೆ ಅಡಿಗೆ ಒಲೆಗೋಡೆಯಲಿ ನ-

ಮ್ಮನ್ನ ಬರೆದು ಪೂಜೆ ಮಾಡಿದರೀಗ

ಅನ್ನವನು ನಾವು ಕೊಡುವೆವು 19


ಭಾಗ್ಯ ಬೇಕಾದರೆ ಬರೆದು ಪೆಟ್ಟಿಗೆಮ್ಯಾಲೆ

ಭಾಳ ಭಕ್ತಿಂದ ಪೂಜೆ ಮಾಡಿದರೆ

ಭಾಗ್ಯ ಕೊಡುವೆವೆಂದ್ಹೇಳಿ ನಡೆದರು 20


ಸುಣ್ಣಸಾರಣೆಮಾಡಿ ಬಣ್ಣ ಚಿತ್ರವ ಬರೆದು

ಚೆನ್ನಾಗಿ ಬರೆದು ಬುಧ ಬೃಹಸ್ಪತಿಗಳನೆ

ಮನ್ನಿಸಿ ಪೂಜಿಸಿದಳಾಗ 21


ಹಚ್ಚಿಟ್ಟು ಗಂಧಾಕ್ಷತೆ ಪುಷ್ಪಗಳ

ಉತ್ರಾಣಿ ಅಕ್ಕಿ ಮಂತ್ರಾಕ್ಷತೆ ಮಾಡಿ

ಭಕ್ತಿಂದೆ ಪೂಜಿಸಿದಳಾಗ 22


ಗೋಪಾಳಕ್ಕ್ಹೋದಲ್ಲಿ ಗೋಧಿ ಅಕ್ಕಿ ಬ್ಯಾಳೆ

ಹಾಕುವರು ನಾಲ್ಕು ಬೀದಿಯಲಿ ಅದು ಗಂಟು

ತಾವ್‍ಕಟ್ಟಿ ಹೊತ್ತರ್ಹೆಗಲಲ್ಲಿ 23


ಹಿಡಿಜೋಳ ಬೇಡಿದರೆ ಪಡಿಜೋಳ ಹಾಕುವರು

ಬಡವರು ನೀವು ಬನ್ನಿರೆಂದು ಕರೆದು

ಹಿಡಿಹಿಡಿ ರೊಕ್ಕ ಕೊಡುವೋರು 24


ಭರದಿಂದ ಬಂದಾಗ ಸುರುವಿದರು ಧಾನ್ಯವನು

ಬರೆದಂಥ ಗೊಂಬೆ ನೋಡಿ ಕೇಳುತ ಅದರ

ವಿವರವನು ಹೇಳಬೇಕೆನುತ 25


ಇವರು ಬುಧ ಬೃಹಸ್ಪತಿಗಳೆಂಬೊ ದೇವತೆಗಳು

ಇವರು ಬಂದೆನ್ನ ಮನೆಯಲ್ಲೂಟವನುಂಡು

ಒಲಿದ್ವರವ ಕೊಟ್ಟು ನಡೆದರು26


ಇಂಥÀವರ ಪುಣ್ಯದಿಂದೀ ಧಾನ್ಯ ದೊರಕಿದವು ನಿ

ರಂತರದಿ ನಮ್ಮ ಮನೆಯಲ್ಲಿಟ್ಟವರನು

ಸಂತೋಷದಲಿ ಪೂಜಿಸುವಣೆಂದ್ರು 27


ಭಾಳ ಅನ್ನವ ಮಾಡು ಜೋಳ ಭಕ್ಕರಿ ಮಾಡು

ಬ್ಯಾಳೆಯ ತವ್ವೆ ಬೆಲ್ಲ ಪಲ್ಯವು ಬೆಣ್ಣೆ

ಮಾಡಿ ನೈವೇದ್ಯಕ್ಕಿಡುಯೆಂದ್ರು (incomplete?)

***