..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಬಾರೋ ಬಾರೋ ಸುಂದರನೆ
ಬರ ಹೇಳಿದಳೊ ನಿನ್ನ ರಮಣಿ ಪ
ಶುಕಪಿಕರವದಿಂದ ವಿಕಳಿತಳಾಗಿ ಧೈರ್ಯ
ಕಕವಿಕಳಾಗಿಹಳಿವಳು ನೀ ಬೇಗನೆ 1
ಸಾರ ಸುಗುಣೆ ನಿನ್ನ ದಾರಿಯ ನೋಡಿ ನೋಡಿ
ಸರಸಿಜಮುಖಿ ನೀ ಪೋಗಿ ಬಾರೆಂದಳು 2
ಶ್ರೀ ವಾಸುದೇವವಿಠಲ ನಿನ್ನಯ ಸಖಿ
ಭಾವಜನ ರೂಪವ ತೋರು ತೋರಿಸೆಂದಳು 3
***