ನೀ ಬಾರದಿರೆ ಬಾರನು ಶ್ರೀ ನರಹರಿ ಪ
ನೀ ಬಾರದಿರೆ ಬಾರ ನೀರಜಾಕ್ಷನು ಹರಿನಾನು ನಂಬಿದೆ ನಿಮ್ಮ ನೀವು ಪಾಲಿಸಬೇಕು ಅ.ಪ.
ನೀನು ಆತನ ಕಾಯ್ದಿ ತಾನು ಆತನ ಕಾಯ್ದನೀನು ಬಿಡಲು ಬಿಟ್ಟ ಭಾನುಸುತನ ಕೃಷ್ಣ 1
ನಿಮ್ಮ ಮಾತುಗಳನ್ನು ಒಮ್ಮೆ ಮೀರನು ಹರಿನಮ್ಮ ಬಿಡುವುದ್ಯಾಕೊ ಬ್ರಹ್ಮ ಪದಾರ್ಹನೆ 2
ಇಂದು ನಾಳೆನ್ನದೆ ಆನಂದತೀರ್ಥರೆ ನಮ-ಗಿಂದು ತೋರಿಸು ಹರಿಯ ಇಂದಿರೇಶನ ಪ್ರೀಯ 3
****