Showing posts with label ಆಸೆತ ಬಿಡು ಮನವೆ ನಿನ್ನ ದುರಾಸೆಯ ಬಿಡು ಮನವೆ venkatakrishna. Show all posts
Showing posts with label ಆಸೆತ ಬಿಡು ಮನವೆ ನಿನ್ನ ದುರಾಸೆಯ ಬಿಡು ಮನವೆ venkatakrishna. Show all posts

Tuesday, 1 June 2021

ಆಸೆತ ಬಿಡು ಮನವೆ ನಿನ್ನ ದುರಾಸೆಯ ಬಿಡು ಮನವೆ ankita venkatakrishna

 by yadugiriyamma

ಸಾಮಾಜಿಕ ಕೀರ್ತನೆಗಳು

ಆಸೆತ ಬಿಡು ಮನವೆ ನಿನ್ನ ದುರಾಸೆಯ ಬಿಡು ಮನವೆ ಪ

ಆಸೆಯ ಬಿಟ್ಟು ಶ್ರೀವಾಸುದೇವನ ಪಾದ
ಘಾಸಿಯಾಗದೆ ನಂಬು ಲೇಸಾಗುವುದು ನಿನಗೆ ಅ.ಪ

ಕಾಮಕ್ರೋಧಗಳ ಬಿಟ್ಟು ಮೋಹಮದಡಂಭ ಅಸೂಯೆಸುಟ್ಟು
ಎಮ್ಮದು ತಮ್ಮದು ಎಂಬ ಭ್ರಾಂತಿಯ ಬಿಟ್ಟು
[ನಮ್ಮ] ವನಜನಾಭನ ಪಾದದೊಳಗೆ ನೀ ಮನವಿಟ್ಟು 1

ಪರದ್ರೋಹ ಪರನಿಂದನೆಯನು ಮಾಡಿ ಪಾತಕಿಯಾಗದೆ
ಬರಿದೆ ನವರತ್ನ ರಜತ ಸುವರ್ಣ ಧನಧಾನ್ಯದಾಶೆಯ ಬಿಟ್ಟು
ನಿರಾಶೆಯೊಳಿರು ನೀನು 2

ಹಾನಿವೃದ್ಧಿ ಯಶೋಲಾಭಗಳೆಲ್ಲ ಸ್ವಾಮಿಯಧೀನವಲ್ಲದೆ
ನೀನು ಯೋಚನೆಯನ್ನು ಮಾಡಿಯೆ ಫನವೇನು
ಶ್ರೀನಿವಾಸನ ಪಾದ ನೇಮದಿಂದಲೆ ನಂಬು 3
****