ರಾಗ ಕೇದಾರಗೌಳ ತ್ರಿಪುಟತಾಳ
ಕರೆದು ಮುದ್ದಿಸುವ ಗೋಪಿಯ ಭಾಗ್ಯಕೆಣೆಯುಂಟೆ ||ಪ||
ಗುರುಕುಲಾಂಬುಧಿಚಂದ್ರ ಕೃಷ್ಣ ಬಾ ಬಾರೆಂದು ||ಅ||
ಸವ್ಯ ಹಸ್ತದಿ ಅಪಸವ್ಯ ಕರವ ಪಿಡಿದು
ನವ್ಯಸುಧಾಂಗುಲಿ ಸವಿಯುತಲಿ
ಅವ್ಯಕ್ತಮಧುರೋಕ್ತಿಗಳಿಂದಲಾಡುವ
ಭವ್ಯಮೂರುತಿ ಕೃಷ್ಣ ಪರಮಪುರುಷನೆಂದು ||
ಒಂದು ಕುಚವನುಣುತ ಮತ್ತೊಂದು ಕುಚವ ಹಿಡಿದು
ಸಂದಿಸಿ ಮೊಗವನಾಲೋಕಿಸುತ
ಚಂದದಿ ಕಿರುನಗೆಯಿಂದ ಬೊಮ್ಮಾಂಡವ
ಅಂದು ಬಾಯೊಳು ತೋರ್ದ ಕೃಷ್ಣ ತಾ ಬಾರೆಂದು ||
ಆನೆ ಬಂತೆಂದಾನೆ ಎನಲು ತೊಡೆಯಲ್ಲಿ
ನಿನೀಟಿಸೆ ಲೋಕಂಗಳು ಬೆರಗಾಗುತ
ಜ್ಞಾನನಿಧಿಯೆ ಗುರುಪುರಂದರವಿಠಲ ಇ-
ದೇನೊ ನಿನ್ನ ಮಹಿಮೆ ನಾನೇನರಿಯೆನೆಂದು ||
**********
ಕರೆದು ಮುದ್ದಿಸುವ ಗೋಪಿಯ ಭಾಗ್ಯಕೆಣೆಯುಂಟೆ ||ಪ||
ಗುರುಕುಲಾಂಬುಧಿಚಂದ್ರ ಕೃಷ್ಣ ಬಾ ಬಾರೆಂದು ||ಅ||
ಸವ್ಯ ಹಸ್ತದಿ ಅಪಸವ್ಯ ಕರವ ಪಿಡಿದು
ನವ್ಯಸುಧಾಂಗುಲಿ ಸವಿಯುತಲಿ
ಅವ್ಯಕ್ತಮಧುರೋಕ್ತಿಗಳಿಂದಲಾಡುವ
ಭವ್ಯಮೂರುತಿ ಕೃಷ್ಣ ಪರಮಪುರುಷನೆಂದು ||
ಒಂದು ಕುಚವನುಣುತ ಮತ್ತೊಂದು ಕುಚವ ಹಿಡಿದು
ಸಂದಿಸಿ ಮೊಗವನಾಲೋಕಿಸುತ
ಚಂದದಿ ಕಿರುನಗೆಯಿಂದ ಬೊಮ್ಮಾಂಡವ
ಅಂದು ಬಾಯೊಳು ತೋರ್ದ ಕೃಷ್ಣ ತಾ ಬಾರೆಂದು ||
ಆನೆ ಬಂತೆಂದಾನೆ ಎನಲು ತೊಡೆಯಲ್ಲಿ
ನಿನೀಟಿಸೆ ಲೋಕಂಗಳು ಬೆರಗಾಗುತ
ಜ್ಞಾನನಿಧಿಯೆ ಗುರುಪುರಂದರವಿಠಲ ಇ-
ದೇನೊ ನಿನ್ನ ಮಹಿಮೆ ನಾನೇನರಿಯೆನೆಂದು ||
**********