Showing posts with label ಸೆರಗ ಬಿಡೋ ರಂಗ ಸೆರಗ ಬಿಡೋ ಕರವ ಮುಗಿವೆನೊಮ್ಮೆ purandara vittala SERAGA BIDO RANGA SERAGA BIDO KARAVA MUGIVENOMME. Show all posts
Showing posts with label ಸೆರಗ ಬಿಡೋ ರಂಗ ಸೆರಗ ಬಿಡೋ ಕರವ ಮುಗಿವೆನೊಮ್ಮೆ purandara vittala SERAGA BIDO RANGA SERAGA BIDO KARAVA MUGIVENOMME. Show all posts

Sunday, 5 December 2021

ಸೆರಗ ಬಿಡೋ ರಂಗ ಸೆರಗ ಬಿಡೋ ಕರವ ಮುಗಿವೆನೊಮ್ಮೆ purandara vittala SERAGA BIDO RANGA SERAGA BIDO KARAVA MUGIVENOMME




ಸೆರಗ ಬಿಡೋ ರಂಗ ಸೆರಗ ಬಿಡೋ
ಕರವ ಮುಗಿವೆನೊಮ್ಮೆ ಸೆರಗ ಬಿಡೋ ||ಪ ||

ಅತ್ತೆ ಕಂಡರೆ ಎನ್ನ ಹತ್ತಿರ ಸೇರಳು ಹರಿಯೆ
ಚಿತ್ತದೊಲ್ಲಭ ಎನ್ನ ಸೆರಗ ಬಿಡೋ ||

ಮಾವ ಕಂಡರೆ ಎನ್ನ ಜೀವ ಬಿಡನು ಹರಿಯೆ
ಜೀವದೊಲ್ಲಭ ಎನ್ನ ಸೆರಗ ಬಿಡೋ ||

ಗಂಡ ಕಂಡರೆ ಎನ್ನ ಗುಂಡಿಗಿಕ್ಕುವ ಹರಿ-
ಪುಂಡರೀಕಾಕ್ಷ ಪುರಂದರವಿಠಲ ಸೆರಗ ಬಿಡೋ ||
***

ರಾಗ ಕೇದಾರಗೌಳ ಅಟ ತಾಳ (raga tala may differ in audio)


ಸೆರಗ  ಬಿಡೋ  ರಂಗ  ಸೆರಗ  ಬಿಡೋ
ಕರವೇ  ಮುಗಿವೆನೊಮ್ಮೆ  ಸೆರಗ  ಬಿಡೋ  ||ಪ||

ಅತ್ತೆ  ಕಂಡರೆ  ಎನ್ನ  ಹತಿರ  ಸೇರಲು  ಹರಿಯೇ
ಚಿತ್ತದಲೋಬ್ಭ  ಎನ್ನ  ಸೆರಗ a ಬಿಡೋ  ||೧||

ಮಾವ  ಕಂಡರೆ  ಎನ್ನ  ಜೀವ  ಬಿಡನು  ಹರಿಯೇ
ಜೀವದೊಲ್ಲಭ  ಎನ್ನ  ಸೆರಗ  ಬಿಡೋ  ||೨||

ಗಂಡ  ಕಂಡರೆ  ಎನ್ನ  ಗುಂಡಿಗಿಕ್ಕುವ  ಹರಿ
ಪು0ಡರಿಕಕ್ಷ  ಪುರಂದರ  ವಿಠಲ  ಸೆರಗ  ಬಿಡೋ ||೩||
***

seraga bido ranga seraga bido
karave mugivenomme seraga bido ||pa||

athe kandare enna hathira seralu hariye
chittadalobbha enna seraga bido ||1||

maava kandare enna jiva bidanu Hariye
jeevadollabha enna seraga bido ||2||

ganda kandare enna gundigikkuva hari
Pundarikaksha Purandara vittala seraga bido ||3||
***

pallavi

seraga biDO ranga seraga biDO karava mugivenomme seraga biDO

caraNam 1

atte kaNDare enna hattira sEraLu hariye cittadollabha enna seraga biDO

caraNam 2

mAva kaNDare enna jIva biDanu hariye jIvadollabha enna seraga biDO

caraNam 3

kaNDa kaNDare enna guNDigikkuva hari puNDarIkAkSa purandara viTTala seraga biDO
***

ಸೆರಗ ಬಿಡೋ ರಂಗಾ ಸೆರಗ ಬಿಡೋ|
ಕರವಾ ಮುಗಿವನೊಮ್ಮೆ ಸೆರಗ ಬಿಡೊ|ಪ|
ಅತ್ತೆ ಕಂಡರೆ ಎನ್ನ ಹತ್ತಿರ ಸೇರಳೋ|
ಚಿತ್ತದೊಲ್ಲಭ ಕೃಷ್ಣಾ| ಎನ್ನ ಸೆರಗ ಬಿಡೋ|೧| 
ಮಾವ ಕಂಡರೆ ಎನ್ನ ಜೀವ ಬಿಡನೋ ಹರಿಯೇ|  ಜೀವದೊಲ್ಲಭ ಕೃಷ್ಣಾ ಸೆರಗ ಬಿಡೋ|೨|  

ಗಂಡ ಕಂಡರೆ ಎನ್ನ ಗುಂಡಿಗಿಕ್ಕುವ  ಹರಿಯೇ| ಪುಂಡರೀಕಾಕ್ಷ  ಶ್ರೀ ಪುರಂದರ ವಿಠ್ಠಲ ಸೆರಗ ಬಿಡೋ|೩|
ಸೆರಗ ಬಿಡೋ ರಂಗಾ--
ದಾಸವರೇಣ್ಯರು. ಚತುರಮತಿಗಳು. ಚಾರು ಮಾತುಗಾರರು. ಜ್ಞಾನ, ಅನುಸಂಧಾನ, ಅನುಷ್ಠಾನ, ಅನುಭವ, ಸಮರ್ಪಣೆ ತುಂಬಿ ತೂಗಿ ಹರಿ ಮಹಾತ್ಮೆ ಸಾರುವವರು. 
ಇವರು ಪುರಂದರದಾಸರು. 
ಇವರ ಮಾತು ಮೇಲಿನ ಪದ. 

ಮೇಲೆ ತೋರುವ ಅರ್ಥ ಒಳಗಿಲ್ಲ.   ಒಳ ಅರ್ಥ ಹೊರಗೆ ತೋರುವದಿಲ್ಲ. 
ಹುದುಗಿದ ಅರ್ಥ ಅಮೂಲ್ಯ.
ರಹಸ್ಯ ಬಿಚ್ಚಿಡೋಣ. ಸಾರ್ಥಕ ಅರ್ಥ ತಿಳಿಯುವ ಪ್ರಯತ್ನ. ದಾಸರು, ಅಂತರ್ಯಾಮಿ ವಾಯು, ಹರಿ ಅನುಗ್ರಹಿ ಸಲಿ.🙏

ಸೆರಗ ಬಿಡೋ ರಂಗಾ ಸೆರಗ ಬಿಡೋ|
ಕರವಾ ಮುಗಿವನೊಮ್ಮೆ ಸೆರಗ ಬಿಡೊ|ಪ|

ಅತ್ತೆ ಕಂಡರೆ ಎನ್ನ ಹತ್ತಿರ ಸೇರಳೋ|
ಚಿತ್ತದೊಲ್ಲಭ ಕೃಷ್ಣಾ| ಎನ್ನ ಸೆರಗ ಬಿಡೋ|೧| 

ಇಲ್ಲಿ ಕರ ಮುಗಿದು ಹರಿಯ ಬೇಡುತಿರು ವವಳು ಗೋಪಿ ಅನ್ನಿ, ಸ್ತ್ರೀ ಅನ್ನಿ ಏನೇ  ಇರಲಿ, ಅವಳು ಬಂಧನದಿ ಬಿಗಿದ ಸಂಸಾರಿ ಜೀವಿಯ ಪ್ರತೀಕ.

ಸೀರೆ ಜೀವಿಗೆ ಸುತ್ತಿದ ಮಾಯೆ. ಅಂದರೆ ಹರಿ ಇಚ್ಛೆ. ಸೆರಗು ಸೀರೆಯ ಕೊನೆ. ತುದಿ. ರಂಗನ ಕೈಯಲ್ಲಿ. 

ಆತ -ಬಂಧಕಃ,* ಭವಪಾಶಶ್ಚ ಮೋಚಕಃ. ಬಂಧಕ ಪಾಶ -  ಬೀಗ -ಸೀರೆ ಜೀವನ ಸುತ್ತ.  ಮೋಚಕ ತುದಿ- ಬೀಗದ ಕೈ ಅವನತ್ತ.
ಪತಿ, ಪತ್ನಿ, ಮನೆ ಮಠ, ಧನ ಕನಕ,ಸಂಪತ್ತು ಆದಿ ಯಾವದು ಸುಖಕರ ಎಂಬ ಭ್ರಮೆ ಇದೆಯೋ ಅದೆಲ್ಲ ವಿಷಯ ಸುಖಗಳು. ಅದೇ ಅತ್ತೆ.
ಯಾಕೆ? 
ಸೊಸೆಯ (ಜೀವಿಯ) ಮೇಲೆ dominating nature. ಪ್ರಧಾನ ಪ್ರವೃತ್ತಿ. 
ತಾನೂ ತನ್ನತ್ತ.
ಎಲ್ಲರೂ ತನ್ನ ಸುತ್ತ! . ತನ್ನನ್ನು ಬಿಟ್ಟು ಅನ್ಯತ್ರ ಯಾಕೆ? ಬೇಡ. ಅನ್ನುವದೇ ಅತ್ತೆ. ವಿಷಯಸುಖ.

ಈ ಜೀವಿ ಸುಜೀವಿ. ಚಿತ್ತ ಸಾಧನೆಯತ್ತ. ಹರಿ ಮಹಾತ್ಮೆ ಅರಿವುಂಟು.ಭವಬಂಧನದ ಭಯಗಳ ಅನುಭವವುಂಟು. ಸಾಕೀ ಸಂಸಾರ. ಯಾಕೆ ಬೇಕು ಈ ವಿಷಯ ಸುಖ? 
ನವವಿಧ ಭಕ್ತಿ ಮಾಡುವೆ. ಕರವ ಮುಗಿವೆ. 
ಹೀಗೆ  ನಾನಾಗಿ ಹೊರಟರೆ ನಿನ್ನತ್ತ , ಬಿಟ್ಟಾಳಯೇ ಅತ್ತೆ! 
ಕಂಡರೆ, ಎನ್ನ ನಿನ್ನ  ಹತ್ತಿ ರಾ ಸೇರಳೋ.  ಎನ್ನ ಅತ್ತಿ ಬಹು ಗಟ್ಟಿಗಿತ್ತಿ. 
ವಿಷಯ ಸುಖ ನಿನ್ನನ್ನೇ ಮರೆಸಿ ಬಿಡುವದು ಕೃಷ್ಣಾ. ನನ್ನತ್ತೆ ನನ್ನ ಅಳವಲ್ಲ. ಕೈಮುಗಿವೆ.   ಅತ್ತೆಯಾ ಬಿಡಿಸೋ ನೀನೇ. .

ಹೇಗೆ? 
ಸೆರಗ ಬಿಡೋ ರಂಗಾ ಮಾಯಾಪಾಶ ತೆಗೆ.
ಚಿತ್ತ ನಿಯಾಮಕ ನೀನು ಕೃಷ್ಣಾ. ಚಿತ್ತ ಕರ್ಷಣ ನಿನ್ನ ದು.

ಸೆರಗು ಬಿಡು. ವಿಷಯ ಸುಖದ ಮಾಯಾ ಪಾಶ ಬಿಡಿಸು. ಎನ್ನ ಚಿತ್ತ  ಅಪಹರಿಸು ನಿನ್ನತ್ತ.   ಅತ್ತೆಯ ನಿವಾರಿಸು. 
ನಿನ್ನತ್ತ ಕರೆದೊಯ್ಯೋ. ಕರವ ಮುಗಿವೆ ಭಕ್ತಿಲಿ. 
ಇದು ಸುಜೀವಿಯ ಪ್ರಾರ್ಥನೆ. 


ಮಾವ ಕಂಡರೆ ಎನ್ನ ಜೀವ ಬಿಡನೋ ಹರಿಯೇ|  ಜೀವದೊಲ್ಲಭ ಕೃಷ್ಣಾ ಸೆರಗ ಬಿಡೋ|೨|  

ಮಾವ ಅಂದರೆ ದಶ ಇಂದ್ರಿಗಳು. ಪಂಚ ಕರ್ಮೇಂದ್ರಿಯ, ಪಂಚ ಜ್ಞಾನೇಂದ್ರಿಯ.
ಯಾಕೆ?  
ಇಂದ್ರಿಯಗಳು ಸದಾ ಕ್ರಿಯಾಶೀಲ.
ಮಾವನೂ ಹಾಗೇ. ಕ್ರಿಯಾಶೀಲ.
ಮಾವ ಸದಾ ಅತ್ತೆಯ ಸುತ್ತ. ಸಹಜವಿದು!
ಇಂದ್ರಿಯಗಳ ಸೆಳೆತ ವಿಷಯಸುಖದತ್ತ.

ನೋಡಬಾರದ್ದು ನೋಡುವದು ಕಣ್ಣು. ಹರಿವಾರ್ತೆ ವಲ್ಲೆ, ಲೋಕವಾರ್ತೆ ಬಯಸುವ ಕಿವಿ, ರುಚಿಯತ್ತ ನಾಲಿಗೆ. ಸ್ಪರ್ಶ, ಸುಖದತ್ತ.
ಹರಿ ಪೂಜೆ ವಲ್ಲದ ಕೈ, ತೀರ್ಥಯಾತ್ರೆ ಇಲ್ಲದ  ಕಾಲು, ಹರಿನಾಮ ಕೀರ್ತನೆ ಇಲ್ಲದ ವದನ, ಒಟ್ಟು ಹರಿಯತ್ತ ಎಲ್ಲ ವಲ್ಲದ ಮಾವ ಅಂದರೆ ಇಂದ್ರಿಯಗಳು.
ಇಂತಿರಲು, ನೀ ನನ್ನ ಸೆರಗು ಹಿಡಿದಿರಲು, ನಿನ್ನತ್ತ ನಾ ಹೊರಟರೆ ಬಿಟ್ಟಾನೆಯೇ ಮಾವ? ಇಂದ್ರಿಯಗಳು ಅನ್ಯತ್ರ, ಅತ್ತೆಯತ್ರ, ವಿಷಯಸುಖದತ್ತ ನನ್ನ ಸೆಳೆದು ನನ್ನ ಜೀವ ಬಿಡವು.
ಜೀವದ ಒಡೆಯ ನೀನು ಕೃಷ್ಣಾ.  ಪಾರು ಮಾಡು ನನ್ನನ್ನು.
ಹೇಗೆ?
ಸೆರಗ ಬಿಡೋ ರಂಗಾ.
ಭವದ ಮಾಯಾಪಾಶ ಛೇದಿಸು. ಭವಭಯಹರ ಹರಿಯೇ ಕರವ ಮುಗಿವೆ. ತಾರ ಮಾಡು, ಪಾರು ಮಾಡು ಎನ್ನ.


ಗಂಡ ಕಂಡರೆ ಎನ್ನ ಗುಂಡಿಗಿಕ್ಕುವ  ಹರಿಯೇ| ಪುಂಡರೀಕಾಕ್ಷ  ಶ್ರೀ ಪುರಂದರ ವಿಠ್ಠಲ ಸೆರಗ ಬಿಡೋ|೩|

ಗಂಡ ಅಂದರೆ ಮನಸ್ಸು.
ಯಾಕೆ?
ಗಂಡ ಅಂದರೆ ಒಡೆಯ. ಸಕಲ ಇಂದ್ರಿಯ ಗಳಿಗೆ ಒಡೆಯ ಮನಸ್ಸು.  ದೇಹ ರಥ. ಮನ ಸಾರಥಿ. ಮನ ಎತ್ತ, ಜೀವ ಅತ್ತ. ಇಂದ್ರಿಯಗಳೂ ಅದರ ಸುತ್ತ.

ಮತ್ತೆ ಮನ ಏಕೆ ಗಂಡ?

ಮನ ಸಂಶಯಾತ್ಮಕ. ಚಂಚಲ. ಗಂಡಗೆ ಹೆಂಡತಿ ಮೇಲೆ ಸಂಶಯ.

ಇಂದ್ರಿಯಗಳು ಮನದಿಂದ ನಿಯಂತ್ರಿತ. ಮನದ ಬಯಕೆ ವಿಷಯಸುಖದತ್ತ. 

ಇದಂ ಪ್ರತಿ ದ್ರವತಿ - ಇಂದ್ರಿಯ. ಮನದ ಆಜ್ಞೆ. ಪಾಲಿಸಿದವು ಇಂದ್ರಿಯಗಳು. ವಿಷಯ ಸುಖದತ್ತ ಹರಿದವು. 
ಹರಿಯತ್ತ ಹೋಗಲು ಈ ಗಂಡ ಬಿಡುವನೇ?

ನಿನ್ನ ತ್ತ ಹೊರಟರೆ ಗಂಡ ನನಗೆ ಗುಂಡಿ ತೋಡುವ. ವಿಷಯಸುಖಗಳು ನನ್ನನ್ನು ಮುತ್ತಿ ಮುಳುಗಿಸಿ ಬಿಡುವವು.
ಕೃಷ್ಣಾ, ನೀನಾದರೋ ಸೆರಗು ಹಿಡಿದು ನಿಂತಿರುವೆ. 
ಮನಸ್ಸೇ ಬಂಧ ಮೋಕ್ಷಗಳಿಗೆ ಕಾರಣ. 
ನಿನ್ನತ್ತ ಹೊರಟರೆ ಮೋಚನೆ. 
ಗಂಡನತ್ತ ಹೊರಟರೆ ಬಂಧನ. (ಮನ ತೋಚಿದಂತೆ ವಿಷಯಗಳ ಜೊತೆ ಕುಣಿದರೆ) 
ಸೆರಗು ಬಿಡು. ಪಾಶ ಬಿಚ್ಚು. ಬೀಗ ತೆಗೆ. 
ನಿನ್ನಲ್ಲಿ ಗಾಢ ಭಕ್ತಿ ಕೊಡು. ಅತ್ತೆ, ಮಾವ, ಗಂಡರ ನಂಟು ಬಿಡಿಸು. ವಿಷಯ ವಿರತಿ ಕೊಡು. ಪುರಂದರ ವಿಠ್ಠಲನಲ್ಲಿ‌ ರತಿ ಕೊಡು.
ಹೇ ಕಮಲಾಕ್ಷ. ಕಮಲಾಪತಿ. ವಲ್ಲೆ ಈ ಗಂಡನ.  ಕರ್ಷಿಸು ನಿನ್ನತ್ತ ನನ್ನ. ಇದೇ ಸೆರಗ ಬಿಡೋ ರಂಗಾ.🙏🙏

ಡಾ.ವಿಜಯೇಂದ್ರ. ದೇಸಾಯಿ.
***