Showing posts with label ತಾಯೆ ಬಂದು ನೆಲೆಸೌ ಇಂದಿರೆ ಎನ್ನೆಯ ಮಂದಿರ others ಸಂಪ್ರದಾಯ ಹಾಡು TAAYE BANDU NELASAU INDIRE MANDIRA SAMPRADAYA SONG. Show all posts
Showing posts with label ತಾಯೆ ಬಂದು ನೆಲೆಸೌ ಇಂದಿರೆ ಎನ್ನೆಯ ಮಂದಿರ others ಸಂಪ್ರದಾಯ ಹಾಡು TAAYE BANDU NELASAU INDIRE MANDIRA SAMPRADAYA SONG. Show all posts

Saturday 25 December 2021

ತಾಯೆ ಬಂದು ನೆಲೆಸೌ ಇಂದಿರೆ ಎನ್ನೆಯ ಮಂದಿರ others ಸಂಪ್ರದಾಯ ಹಾಡು TAAYE BANDU NELASAU INDIRE MANDIRA SAMPRADAYA SONG



ತಾಯೆ ಬಂದು ನೆಲೆಸೌ
ಇಂದಿರೆ ಎನ್ನೆಯ ಮಂದಿರದೊಳಗಾನಂದದಿ

ಹಲವು ಕಾಲದಿ ಕಾಣದೆ ನಿಮ್ಮನ್ನು
ಬಳಲುತನಿರ್ಪೆನು ದೇವಿಯೆ
ನಳಿನಾನೇತ್ರೆ ಕರುಣಾದಿಂದಲಿ
ಒಲಿದು ಬಂದಿರಿ ದೇವಿಯೆ

ಮುತ್ತು ಮಾಣಿಕ್ಯದ ಮಂಟಪದಲ್ಲಿ
ರತ್ನದ ಪೀಠವನಿರಿಸುವೆನು
ವಿಷ್ಣು ಸಹಿತಲೆ ಲಕ್ಷ್ಮೀ ನಿಮ್ಮನು
ಅರ್ಥಿಯಿಮ್ ಧ್ಯಾನಿಸಿ ಪೂಜಿಪೆ

ವರಮಣಿ ಖಚಿತದ ನೆರೆಗಿಂಡಿಯೊಳು
ಸುರನದಿ ಗಂಗೆಯ ತುಂಬುತಲಿ
ಸಿರಿವರನರಸಿಯ ಚರಣವ ತೊಳೆದು
ವರವಸ್ತ್ರಗಳಿಂದೊರೆಸುವೆನು

ಅಂಗಜ ಮಾತೆಗೆ ಅಭಿಷೇಕವನು
ಸಂಭ್ರಮದಿಂದಲಿ ಮಾಡುವೆನು
ಅಂದವಾದ ಪೀತಾಂಬರವನು
ಸುಂದರನಡುವಿನೊಳುಡಿಸುವೆನು

ಸಿರಿಮುಡಿಯೆಳೆಸುತ ಹೆರಳನು ಹಾಕುತ
ಪರಿಪರಿ ಕುಸುಮವ ಮುಡಿಸುವೆನು
ಸರಸೀಜಾಕ್ಷಿಗೆ ಸರ್ವಾಭರಣವ
ಪರಮಾದರದಿ ಹಾಕುವೆ

ಅರಶಿನ ಕುಂಕುಮ ಅಕ್ಷತೆ ಗಂಧ
ಪರಿಪರಿ ಕುಸುಮದ ಮಾಲೆಗಳ
ಸಿರಿವರನರಸಿಯ ಕೊರಳಿಗೆ ಹಾರವ
ಪರಮಾದರದಿ ಹಾಕುವೆ

ಪರಿಪರಿ ಪುಷ್ಪದಿಂದೊಡಗೂಡುತಲಿ
ವರಧೂಪಾದಿ ದೀಪಗಳ
ಬಗೆಬಗೆ ಭಕ್ಷ ಪಾಯಸದಿಂದಲೆ
ಮಿಗಿಲಾರೊಗಣೆ ಮಾಡುವೆ

ಮಂಗಳವಾದ್ಯದಿಂದೊಡಗೂಡುತಲಿ
ಅಂಗನೆಯರೆಲ್ಲರು ಹರುಷದಲಿ
ಮಂಗಳಾರತಿ ಎತ್ತಿ ಚಂದದಿ
ವಂದಿಸಿ ನಾನು ಬೇಡುವೆ

ರಕ್ಷಿಸು ರಕ್ಷಿಸು ತಾಯೆ ನಮ್ಮನು
ಪ್ರದಕ್ಷಿಣೆಗಳ ನಾ ಮಾಡುವೆನು
ರಕ್ಷಿಸೆಮ್ಮನು ಲಕ್ಷ್ಮೀ ನಿಮ್ಮನು
ಅರ್ಥಿಯಿಮ್ ಧ್ಯಾನಿಸಿ ಬೇಡುವೆ
**********