kruti by ವಿಶ್ವೇಂದ್ರತೀರ್ಥರು vishwendra teertharu sode mutt
ಗಣೇಶಸ್ತವನ
ಬಾರೋ ಮಹೇಶತನಯ ಗಣೇಶ
ವರವಿಷ್ಣು ಪದಕಭಿಮಾನಿ ವಿಘ್ನೇಶ ||ಪ||
ನಿನ್ನ ಪೂಜಿಸಿ ಧರ್ಮರಾಯ ಗೆದ್ದ
ನಿನ್ನ ಪೂಜಿಸದೆ ದುರ್ಯೋಧನ ಬಿದ್ದ
ನಿನ್ನ ಪೂಜಿಸಿ ರಾಮ ಸತಿಯನೆ ಪಡೆದ
ನಿನ್ನ ನರ್ಚಿಸದ ದಶಕಂಠ ಕೆಟ್ಟ ||೧||
ಸುರಮುಖ್ಯರೆಲ್ಲರು ನಿನ್ನ ಪೂಜಿಪರು
ಪರಮಾತ್ಮನಿಗೆ ನೀನು ಮರಿಮಗನಿರುವಿ
ಸುರಮುನಿ ದಿತಿಜಾದಿಗಳಿಗತಿಪ್ರಿಯನೆ
ಸರ್ವರಿಂದಲು ಮೊದಲ ಪೂಜೆಗೊಂಬುವನೆ ||೨||
ರಾಜೀವಾಕ್ಷಗೆ ಸತ್ಯದೇವಿಯೊಳ್ಜನಿಸಿ
ಮೂಜಗದಲಿ ನೀನು ಪೂಜ್ಯನೆಂದೆನಿಸಿ
ರಾಜೇಶ ಹಯಮುಖ ಚರಣಾಬ್ಜಭೃಂಗ
ಕಂಜಜ ತನಯನ ಹೆಮ್ಮಗ ಕಂಡ್ಯಾ ||೩||
***
Baro maheshatanaya ganesha
varavishnu padakabhimani vighnesha ||pa||
Ninna pujisi dharmaraya gedda
ninna pujisade duryodhana bidda
ninna pujisi rama satiyane padeda
ninna narchisada dashakantha ketta ||1||
Suramukhyarellaru ninna pujiparu
paramatmanige ninu marimaganiruvi
suramuni ditijadigaligatipriyane
sarvarindalu modala pujegombuvane ||2||
Rajivakshage satyadeviyoljanisi
mujagadali ninu pujyanendenisi
rajesha hayamukha charanabjabhrunga
kanjaja tanayana hemmaga kandya ||3||
***
ಬಾರೊ ಮಹೇಶತನಯ ಗಣೇಶ
ವರ ವಿಷ್ಣುಪದಕÀಭಿಮಾನಿ ವಿಘ್ನೇಶ ಪ
ನಿನ್ನ ಪೂಜಿಸಿ ಧರ್ಮರಾಜನು ಗೆದ್ದ
ನಿನ್ನ ಪೂಜಿಸದೆ ದುರ್ಯೋಧನ ಬಿದ್ದ
ನಿನ್ನ ಪೂಜಿಸಿ ರಾಮ ಸತಿಯನೆ ಪಡೆದ
ನಿನ್ನನರ್ಚಿಸದ ದಶಕಂಠನು ಕೆಟ್ಟ 1
ಸುರಮುಖ್ಯರೆಲ್ಲರು ನಿನ್ನ ಪೂಜಿಪರು
ಪರಮಾತ್ಮನಿಗೆ ನೀನು ಮರಿಮಗನಿರುವಿ
ಸುರಮುನಿ ದಿತಿಜಾದಿಗಳಿಗತಿಪ್ರಿಯನೆ
ಸರುವರಿಂದಲು ಮೊದಲು ಪೂಜೆಗೊಂಬನೆ 2
ರಾಜೀವಾಕ್ಷಗೆ ಸತ್ಯಾದೇವಿಯೊಳ್ಜನಿಸಿ
ಮೂಜಗದಲಿ ನೀನು ಪೂಜ್ಯನೆಂದೆನಿಸಿ
ರಾಜೇಶ ಹಯಮುಖ ಚರಣಾಬ್ಜಭೃಂಗ
ಕಂಜಜತನಯನ ಹೆಮ್ಮಗ ಕಂಡ್ಯಾ 3
***